ADVERTISEMENT

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 5:11 IST
Last Updated 3 ಸೆಪ್ಟೆಂಬರ್ 2022, 5:11 IST
ಕುಂದಾಪುರ ಸಮೀಪದ ಕಂದಾವರದ ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ವಾರ್ಷಿಕ ಮಹಾಸಭೆ ನಡೆಯಿತು.
ಕುಂದಾಪುರ ಸಮೀಪದ ಕಂದಾವರದ ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ವಾರ್ಷಿಕ ಮಹಾಸಭೆ ನಡೆಯಿತು.   

ಕುಂದಾಪುರ: ಸಮೀಪದ ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಈಚೆಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಎಸ್.ರತ್ನಾಕರ ಅವರು ಸಂಘಕ್ಕೆ ₹ 2,36,176.70 ನಿವ್ವಳ ಲಾಭ ಬಂದಿದೆ ಎಂದರು. ಹಾಲು ಉತ್ಪಾದಕ ಸದಸ್ಯರಿಗೆ ಶೇಕಡಾ 65 ಬೋನಸ್ ಹಾಗೂ ಶೇಕಡಾ 20 ಡಿವಿಡೆಂಡ್ ನೀಡಲಾಗುವುದೆಂದು ತಿಳಿಸಿದರು. ಕಾರ್ಯದರ್ಶಿ ದೇವೇಂದ್ರ ಎನ್.ಉಗ್ರಾಣಿ, ಸಂಘದ ವರದಿ ಮಂಡಿಸಿದರು. ನಿರ್ದೇಶಕ ಎಸ್. ಜನಾರ್ದನ ಸ್ವಾಗತಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ್‍ ಅವರು ಪಶು ಆಹಾರ ಬಳಕೆ, ರಾಸುಗಳ ನಿರ್ವಹಣೆ ಮತ್ತು ಹಸುವಿನ ವಿಮೆ, ಖನಿಜ ಮಿಶ್ರಣ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಉಮೇಶ ಕುಂದರ್ ಹಾಲಿನ ಗುಣಮಟ್ಟ, ಶುದ್ಧ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.