ADVERTISEMENT

ಸರಿಯಾದ ಕ್ರಮ ಅಲ್ಲ: ನೀರೆ ಕೃಷ್ಣ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 13:11 IST
Last Updated 20 ಮೇ 2020, 13:11 IST
ನೀರೆ ಕೃಷ್ಣ ಶೆಟ್ಟಿ
ನೀರೆ ಕೃಷ್ಣ ಶೆಟ್ಟಿ   

ಹೆಬ್ರಿ: ‘ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನದೊಂದಿಗೆ ಹೊಸ ಸಮಿತಿ ರಚನೆಗೆ ಮುಂದಾಗಿರುವುದು ದುರದೃಷ್ಟಕರ. ಇದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಜಾರಿಗೆ ತಂದಿರುವ ಪಂಚಾಯಿತಿರಾಜ್ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಕಾರ್ಕಳ ತಾಲ್ಲೂಕು ಪಂಚಾಯಿತಿರಾಜ್ ಒಕ್ಕೂಟದ ಗೌರವಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅಸಾಧ್ಯ. ಆದರೆ, ರಾಜಕೀಯ ವ್ಯಕ್ತಿಗಳ ನಾಮನಿರ್ದೇಶನದ ಸಮಿತಿಯನ್ನು ರಚನೆ ಮಾಡುವುದು ಸರಿಯಾದ ಕ್ರಮವಲ್ಲ. 73ನೇ ತಿದ್ದುಪಡಿಯಲ್ಲಿ ಗ್ರಾಮ ಪಂಚಾಯಿತಿಗೆ ಸದಾಕಾಲ ಚುನಾಯಿತ ಪ್ರತಿನಿಧಿಗಳೇ ಇರಬೇಕು. ಈಗಿರುವ ಪಂಚಾಯಿತಿ ಸದಸ್ಯರ ಆಡಳಿತವನ್ನು ಆರು ತಿಂಗಳು ಮುಂದುವರಿಸಬಹುದು ಅಥವಾ ಆಡಳಿತಾಧಿಕಾರಿಗಳ ನೇಮಕ ಮಾಡಬಹುದು. ನಾಮನಿರ್ದೇಶನ ಸಮಿತಿಯನ್ನು ರಚಿಸಿದರೆ ರಾಜಕೀಯ ಹಸ್ತಕ್ಷೇ‍ಪವಾಗಿ, ವಿಕೇಂದ್ರಿಕರಣ ವ್ಯವಸ್ಥೆಗೆ ಮಾರಕವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT