ADVERTISEMENT

ಹೆಬ್ರಿ: ಧ್ವಜದ ಆಕಾರದಲ್ಲಿ ವ್ಯತ್ಯಯ, ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:23 IST
Last Updated 12 ಆಗಸ್ಟ್ 2022, 5:23 IST
ಸರ್ಕಾರ ಹಂಚಲು ನೀಡಿರುವ ರಾಷ್ಟ್ರಧ್ವಜ
ಸರ್ಕಾರ ಹಂಚಲು ನೀಡಿರುವ ರಾಷ್ಟ್ರಧ್ವಜ   

ಹೆಬ್ರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮನೆಮನೆಯಲ್ಲೂ ಸಂಭ್ರಮಾಚರಣೆ ಮಾಡಲು ಸರ್ಕಾರ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಮೂಲಕ ರಾಷ್ಟ್ರಧ್ವಜವನ್ನು ವಿತರಿಸುತ್ತಿದ್ದು ಸರ್ಕಾರ ಒದಗಿಸಿದ ಆಕಾರವಿಲ್ಲದ ನೈಲಾನ್‌ ಬಟ್ಟೆಯ ರಾಷ್ಟ್ರಧ್ವಜವನ್ನು ಕಂಡು ದೇಶಪ್ರೇಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಧ್ವಜದ ಆಕಾರ ವಿನ್ಯಾಸವು ರಾಷ್ಟ್ರಧ್ವಜ ನೀತಿಸಂಹಿತೆಯಂತೆ ಇಲ್ಲ. ಅಳತೆಯೂ ತುಂಬಾ ವ್ಯತ್ಯಾಸ ಇದೆ. ಅಶೋಕಚಕ್ರವು ಮೊಟ್ಟೆಯ ಆಕಾರದಲ್ಲಿದೆ, ಹೆಚ್ಚಿನ ಧ್ವಜಗಳ ಹೊಲಿಗೆ ಕೂಡ ಬಿಟ್ಟಿದೆ. ಇದನ್ನು ಹಂಚಲು ಮನಸ್ಸು ಒಪ್ಪುವುದಿಲ್ಲ. ನಾವು ಹಂಚಿದ ಬಹುತೇಕ ರಾಷ್ಟ್ರಧ್ವಜವನ್ನು ಪಡೆದವರು ಮರಳಿ ಕೊಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಧ್ವಜದ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಜನತೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.