
ಪ್ರಜಾವಾಣಿ ವಾರ್ತೆ
ಹೆಬ್ರಿ: ತಾಲ್ಲೂಕಿನ ಯಕ್ಷಗಾನ ಕಲಾವಿದ, ಸಮಾಜ ಸೇವಕ ಶಿವಪುರ ರತ್ನಾಕರ ಶೆಣೈ ಆರ್ಯಭಟ ಆರ್ಗನೈಜೇಷನ್ ನೀಡುವ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅವರು ಹವ್ಯಾಸಿ ಕಲಾವಿದರಾಗಿದ್ದು, ಯಕ್ಷ ಗುರುಗಳಾಗಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವುದರ ಜೊತೆಗೆ 100ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ. ಅನಾಥಾಶ್ರಮ ವಾಸಿಗಳಿಗೆ ಯಕ್ಷಗಾನ, ಭಜನಾ ತರಬೇತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.