ಹೆಬ್ರಿ: ತಾಲ್ಲೂಕಿನ ಕಂಚರ್ಕಳ ಎಂಬಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಗೆ ನಿರ್ಮಿಸಿದ್ದ ಬದಲಿ ರಸ್ತೆಯು ಭಾರಿ ಮಳೆಯಿಂದ ಮುಳುಗಡೆಯಾಗಿದ್ದು, ರಸ್ತೆ ಬೇಡಿಕೆ ಕುರಿತು ಸ್ಥಳೀಯರಿಂದ ಮನವಿ ಬಂದಿದ್ದ ಹಿನ್ನೆಲೆ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರಿ ಮಳೆಯಿಂದ ತಾತ್ಕಾಲಿಕ ರಸ್ತೆಯ ಮೇಲೆ ನೀರು ಹರಿದು ವಾಹನಗಳು ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಬದಲಿ ಮಾರ್ಗ ಬಳಸಬೇಕು. ಸ್ಥಳೀಯ ಜನರಿಗೆ ನೆರವಾಗಲು ಮಳೆ ಕಡಿಮೆಯಾದ ಬಳಿಕ ಈ ರಸ್ತೆ ಬಳಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಸೇತುವೆ ಕೆಲಸದಲ್ಲಿ ಲೋಪ ಉಂಟಾಗದಂತೆ ಸಮರ್ಪಕವಾಗಿ ನಡೆಸುವಂತೆ ಅವರು ಸೂಚಿಸಿದರು.
ತಹಶೀಲ್ದಾರ್ ಎಸ್.ಎ. ಪ್ರಸಾದ್, ಕುಚ್ಚೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ ಶೆಟ್ಟಿ ಬಾದ್ಲು, ಸದಸ್ಯ ಮಹೇಶ ಶೆಟ್ಟಿ ಕಾನ್ಬೆಟ್ಟು, ಸಮಾಜ ಸೇವಕ ರಾಘವೇಂದ್ರ ನಾಯ್ಕ, ಗುತ್ತಿಗೆದಾರ ಗಣೇಶ್ ಕುಲಾಲ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.