ADVERTISEMENT

ಹೆಬ್ರಿ | ಕೃಷಿ ಭೂಮಿ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:54 IST
Last Updated 25 ಮೇ 2025, 13:54 IST
ಕುಚ್ಚೂರಿನಲ್ಲಿ ಅಡಿಕೆ ತೋಟ ಜಲಾವೃತವಾಗಿರುವುದು
ಕುಚ್ಚೂರಿನಲ್ಲಿ ಅಡಿಕೆ ತೋಟ ಜಲಾವೃತವಾಗಿರುವುದು   

ಹೆಬ್ರಿ: ತಾಲ್ಲೂಕಿನ ಚಾರ ನವೋದಯದ ಬಳಿ ನಿರ್ಮಾಣವಾಗಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಲು ಅಳವಡಿಸಿದ್ದ ಗೇಟ್ ತೆರೆಯದೆ ಕುಚ್ಚೂರಿನಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದೆ.

ಸಣ್ಣ ನೀರಾವರಿ ಇಲಾಖೆಯವರು ಡ್ಯಾಂನ ಸ್ವಯಂ ಚಾಲಿತ ಗೇಟನ್ನು ಮೇಲೆತ್ತಿದ್ದಾರೆ. ಆದರೆ ಕುಚ್ಚೂರು ಬದಿಯಿಂದ ನೀರು ಸೀತಾನದಿಗೆ ಸೇರುವ ಜಾಗದಲ್ಲಿ ಡ್ಯಾಂನ ನೀರು ನಿಲ್ಲಲು ಗೇಟ್ ಅಳವಡಿಕೆ ಮಾಡಿದ್ದರು. ಆದರೆ ಅದನ್ನು ತೆರೆಯದೆ ಇರುವುದರಿಂದ ಕೃಷಿಕರಿಗೆ ಸಂಕಷ್ಟ ಎದುರಾಗಿದೆ.

ಈ ಹಿಂದೆ ಬಾರಿ ಪ್ರಮಾಣದಲ್ಲಿ ಇಲ್ಲಿನ ಕೃಷಿ ಭೂಮಿ ಮುಳುಗಡೆಯಾಗಿತ್ತು. ಪುಷಿಂಗ್ ವ್ಯವಸ್ಥೆ ಮಾಡಿಕೊಟ್ಟು ನೀರು ಕೃಷಿ ಭೂಮಿಯಿಂದ ಹೊರ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಗೇಟು ತೆರೆಯದೆ ಇರುವುದರಿಂದ ಬಾರಿ ಪ್ರಮಾಣದ ನೀರು ಅಡಿಕೆ ತೋಟದಲ್ಲಿ ನಿಂತಿದೆ.

ADVERTISEMENT
ಕುಚ್ಚೂರಿನಲ್ಲಿ ಅಡಿಕೆ ತೋಟ ಜಲಾವೃತವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.