ಹೆಬ್ರಿ: ಹೆಬ್ರಿ ಜೇಸಿಐ ಘಟಕದಿಂದ ಸೆಲ್ಯೂಟ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಶ್ರೀರಾಘವೇಂದ್ರ ಜನರಲ್ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿ ಶ್ರೀರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್. ಐತಾಳ್ ಮಾತನಾಡಿ, ‘ಉಮೇಶ್ ಅವರು 25 ವರ್ಷದಿಂದ ಆಂಬುಲೆನ್ಸ್ ಚಾಲಕರಾಗಿ ಜನಮನ್ನಣೆ ಪಡೆದಿದ್ದಾರೆ. ಅವರ ಸೇವೆ ಮತ್ತಷ್ಟು ವಿಸ್ತರಿಸಿ ಜನರಿಗೆ ಒಳಿತಾಗಲಿ’ ಎಂದರು.
ಹೆಬ್ರಿ ಶ್ರೀರಾಘವೇಂದ್ರ ಚಾರಿಟಬಲ್ ಟ್ರಸ್ಟ್‌ನ ಡಾ.ರಾಮಚಂದ್ರ ಐತಾಳ್, ಹೆಬ್ರಿ ಜೇಸಿಐ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ, ಪೂರ್ವಾಧ್ಯಕ್ಷರಾದ ಹರೀಶ ಪೂಜಾರಿ, ರಾಮಕೃಷ್ಣ ಆಚಾರ್ಯ, ಪ್ರಮುಖರಾದ ಜ್ಯೋತಿ ಕೆ. ಶೆಟ್ಟಿ, ಸುಜಾತಾ ಹರೀಶ, ನಿರೀಕ್ಷಿತ್ ಪೂಜಾರಿ, ಚೈತನ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.