ADVERTISEMENT

ಹಿಂದುತ್ವಕ್ಕೆ ನಾಯಕರು ಬೇಕು: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:22 IST
Last Updated 6 ಅಕ್ಟೋಬರ್ 2022, 6:22 IST
‌ಪ್ರಮೋದ್ ಮುತಾಲಿಕ್
‌ಪ್ರಮೋದ್ ಮುತಾಲಿಕ್   

ಹೆಬ್ರಿ: ‘ಉಡುಪಿ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹಲವರು ಪ್ರಶ್ನಿಸುತ್ತಿದ್ದಾರೆ. ನಾನು ಸ್ಪರ್ಧೆಯ ಆಕಾಂಕ್ಷಿ ಅಲ್ಲ. ಆದರೆ‌, ಈ ಜಿಲ್ಲೆ ಹಿಂದುತ್ವದ ಭದ್ರಕೋಟೆಯಾಗಿದೆ. ಹಿಂದುತ್ವಕ್ಕೆ ಸಮರ್ಥ ನಾಯಕತ್ವ ಬೇಕಾಗಿದೆ. ಅದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇನೆ’ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಮುಸ್ಲಿಂ, ಕ್ರಿಶ್ಚಿಯನ್ ಸಂಘಟನೆಗಳಿಂದ ಬೆದರಿಕೆಯಿಲ್ಲ. ಆದರೆ, ರಾಜ್ಯ ಬಿಜೆಪಿ ಮತ್ತು ಬಿಜೆಪಿ ಸರ್ಕಾರವೇ ನನಗೆ ತೊಂದರೆ ಕೊಡುತ್ತಿದೆ. ಹಿಂದುತ್ವದ ಹೆಸರಿನಲ್ಲಿ ರಾಜ್ಯ ಬಿಜೆಪಿ ನಾಯಕರು ಹಿಂದುತ್ವ ಕಾರ್ಯಕರ್ತರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಅಂತಹ ನಾಯಕರನ್ನು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಕೆಳಗಿಳಿಸಲು ಹಿಂದುತ್ವ ಕಾರ್ಯಕರ್ತರಿಗೆ ಗೊತ್ತಿದೆ’ ಎಂದರು.

‘ಹಿಂದುತ್ವ ಕಾರ್ಯಕರ್ತ ಪರೇಶ್ ಮೇಸ್ತ ಸಾವು ಅದು ಸಹಜ ಸಾವಲ್ಲ ಅದೊಂದು ಕೊಲೆ. ‌ಇಸ್ಲಾಮಿಕ್ ಗೂಂಡಾಗಳ ಕೃತ್ಯವಾಗಿದೆ. ಕಾಂಗ್ರೆಸ್ ಸರ್ಕಾರವೇ ಈ ಕೊಲೆಗೆ ಮುಖ್ಯ ಕಾರಣ. ಕೇಂದ್ರ ಸರ್ಕಾರವು ಮತ್ತೆ ಸಿಬಿಐ ತನಿಖೆ ಮಾಡಬೇಕು. ಪರೇಶ್ ಮೇಸ್ತ ಕೊಲೆಗೆ ಕಾರಣರಾದವರನ್ನು ಗಲ್ಲಿಗೇರಿಸುವ ತನಕ ಶ್ರೀರಾಮ‌ಸೇನೆ ಹೋರಾಡಲಿದೆ’ ಎಂದು ಹೇಳಿದರು. ಹಿಂದುತ್ವ ಸಂಘಟನೆಯ ಮುಖಂಡ ರತ್ನಾಕರ ಅಮೀನ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.