ADVERTISEMENT

ಕಾಲಿಗೆ ಸರಪಳಿ ಕಟ್ಟಿಕೊಂಡು ಈಜಿ ದಾಖಲೆ ಮಾಡಿದ ಗಂಗಾಧರ್‌

ಪದ್ಮಾಸನ ಭಂಗಿಯಲ್ಲಿ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ 1.4 ಕಿ.ಮೀ ಈಜು

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 12:18 IST
Last Updated 24 ಜನವರಿ 2021, 12:18 IST
ಉಡುಪಿಯ ಪಡುಕೆರೆಯ ಸಮುದ್ರದಲ್ಲಿ ಭಾನುವಾರ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಕಟ್ಟಿಕೊಂಡು ಸಮುದ್ರದಲ್ಲಿ 1.4 ಕಿ.ಮೀ ಈಜಿ ದಾಖಲೆ ಮಾಡಿದ  ಗಂಗಾಧರ್ ಜಿ.ಕಡೆಕಾರ್
ಉಡುಪಿಯ ಪಡುಕೆರೆಯ ಸಮುದ್ರದಲ್ಲಿ ಭಾನುವಾರ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಕಟ್ಟಿಕೊಂಡು ಸಮುದ್ರದಲ್ಲಿ 1.4 ಕಿ.ಮೀ ಈಜಿ ದಾಖಲೆ ಮಾಡಿದ  ಗಂಗಾಧರ್ ಜಿ.ಕಡೆಕಾರ್   

ಉಡುಪಿ: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಕಟ್ಟಿಕೊಂಡು ಸಮುದ್ರದಲ್ಲಿ 1.4 ಕಿ.ಮೀ ಈಜುವ ಮೂಲಕ 65 ವರ್ಷದ ಗಂಗಾಧರ್ ಜಿ.ಕಡೆಕಾರ್ ಇಂಡಿಯನ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದರು.

ಪಡುಕೆರೆಯ ಸಮುದ್ರ ತೀರದಲ್ಲಿ ಭಾನುವಾರ ಬೆಳಿಗ್ಗೆ 8.36ಕ್ಕೆ ಸಮುದ್ರಕ್ಕೆ ಧುಮಿಕಿದ ಗಂಗಾದರ್‌ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ 1 ಗಂಟೆ 13 ನಿಮಿಷ 7 ಸೆಕೆಂಡ್‌ಗಳಲ್ಲಿ 1.4 ಕಿ.ಮೀ ಕ್ರಮಿಸಿ ಸಾಧನೆ ಮಾಡಿದರು.

ಗಂಗಾಧರ್‌ಗೆ ಕನಿಷ್ಠ 800 ಮೀಟರ್‌ ಈಜುವ ಗುರಿ ನೀಡಲಾಗಿತ್ತು. 1,400 ಮೀಟರ್‌ ಈಜಿ ದಾಖಲೆ ನಿರ್ಮಿಸಿದ್ದಾರೆ ಎಂದು ಇಂಡಿಯನ್ ಬುಕ್ ಆಪ್‌ ರೆಕಾರ್ಡ್ಸ್‌ನ ಪ್ರತಿನಿಧಿ ಆರ್‌.ಹರೀಶ್ ಘೋಷಿಸಿದರು. ಬಳಿಕ ಸಂಸ್ಥೆಯಿಂದ ತಾತ್ಕಾಲಿಕ ಪ್ರಮಾಣ ಪತ್ರ ನೀಡಲಾಯಿತು.

ADVERTISEMENT

ದಾಖಲೆ ನಿರ್ಮಿಸಿ ತೀರಕ್ಕೆ ಬರುತ್ತಿದ್ದಂತೆ ಗಂಗಾಧರ್ ಅವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌, ಶಾಸಕ ರಘುಪತಿ ಭಟ್‌ ಹಾರ ಹಾಕಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.