ADVERTISEMENT

ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ

ಒಂಬತ್ತು ಬೈಕ್‌ ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:11 IST
Last Updated 12 ಜೂನ್ 2022, 6:11 IST
ಸೋಮಶೇಖರ
ಸೋಮಶೇಖರ   

ಕೋಟ(ಬ್ರಹ್ಮಾವರ): ಉಡುಪಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ 12 ಬೈಕ್‌ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಒಂಬತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.‌

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಶೇಖರ (21), ಬಾಗಲಕೋಟೆ ಹುನಗುಂದದ ಶಂಕರ ಗೌಡ (23) ಬಂಧಿತ ಆರೋಪಿಗಳು.

ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಕೋಟ ಪೊಲೀಸ್‌ ಸಿಬ್ಬಂದಿ ವಡ್ಡರ್ಸೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಈ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ADVERTISEMENT

ಈ ದ್ವಿಚಕ್ರ ವಾಹನ ಕಳ್ಳರು ಕಳೆದ ಮೂರು ವರ್ಷಗಳಿಂದ ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು, ಕೋಟ ಪೊಲೀಸರ ವಿಶೇಷ ತಂಡವು ಪ್ರಕರಣಗಳನ್ನು ಭೇದಿಸಿದೆ.

ಉಡುಪಿ ನಗರ ಠಾಣೆಯ 7, ಬ್ರಹ್ಮಾವರ ಠಾಣೆ, ಶಂಕರಾನಾರಾಯಣ ಠಾಣೆ, ಶೃಂಗೇರಿ ಠಾಣೆ, ವಿಜಯನಗರದ ಜಿಲ್ಲೆಯ ಇಟಗಿ ಠಾಣೆ, ಮತ್ತು ದಾವಣಗೆರೆ ಠಾಣೆಯ ತಲಾ ಒಂದು ಪ್ರಕರಣದಲ್ಲಿ ಈ ಕಳ್ಳರು ಆರೋಪಿಗಳಾಗಿದ್ದರು. ₹ 45 ಲಕ್ಷ ಅಂದಾಜು ಮೌಲ್ಯದ ಒಟ್ಟು 9 ದ್ವಿಚಕ್ರ ವಾಹನಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.

ಬ್ರಹ್ಮಾವರ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ‌ ನೇತೃತ್ವದ ವಿಶೇಷ ತಂಡದಲ್ಲಿ ಕೋಟ ಠಾಣೆಯ ಸಬ್‌ ಇನ್‌ಸ್ಪೆಪೆಕ್ಟರ್‌ ಮಧು, ಕೋಟ ಠಾಣೆಯ ತನಿಖಾ ವಿಭಾಗದ ಪಿಎಸ್‌ಐ ಪುಷ್ಪಾ, ಪಿಎಸ್‌ಐಗಳಾದ ಮಹಾಂತೇಶ್‌‌‌‌‌‌, ಪುನೀತ್‌‌‌, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿಎಸ್‌ಐ ಮಂಜುನಾಥ ಮರಬದ, ಕೋಟ ಠಾಣೆಯ ಎಎಸ್‌ಐ ರವಿ ಕುಮಾರ್‌‌‌, ಸಿಬ್ಬಂದಿ ರಾಘವೇಂದ್ರ, ಪ್ರಸನ್ನ, ರಾಜೇಶ್‌, ಕೃಷ್ಣ ಹಾಗೂ ಬ್ರಹ್ಮಾವರ ವೃತ್ತ ಕಚೇರಿಯ ಪ್ರದೀಪ್ ನಾಯಕ ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿ ಸತೀಶ, ಸಂತೋಷ ರಾಥೋಡ್, ಕಿರಣ, ಹನುಮಂತ, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.