ಬ್ರಹ್ಮಾವರ: ಭಾರತೀಯ ರಿಸರ್ವ್ ಬ್ಯಾಂಕ್‌ನ ಬ್ಯಾಂಕಿಂಗ್ ಸಾಕ್ಷರತಾ ಅನುಷ್ಠಾನ ಮೌಲ್ಯಮಾಪನ ತಂಡ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯಿತಿಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮೂಹಿಕ ಕಾಮಗಾರಿ ನಿರತ ತಂಡಗಳ ಸದಸ್ಯರನ್ನು ಭೇಟಿ ಮಾಡಿ ಬ್ಯಾಂಕಿಂಗ್ ವಿಮೆ, ಸುರಕ್ಷಿತ ಬ್ಯಾಂಕಿಂಗ್ ನಿರ್ವಹಣೆ, ಸೌಲಭ್ಯ ಲಭ್ಯತೆ, ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಮನ್ ರೇಗಾ ಕಾರ್ಮಿಕರ ಬ್ಯಾಂಕಿಂಗ್ ನಿರ್ವಹಣೆ, ವಿಮಾ ಕಾರ್ಯ ಚಟುವಟಿಕೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಸುನಿಲ್, ಪಂಕಜ್ ಕುಮಾರ್, ಮಹದೇವಪ್ಪ ತಂಡದಲ್ಲಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಲಂಧರ ಶೆಟ್ಟಿ, ಉಪಾಧ್ಯಕ್ಷೆ ಪ್ರಭಾವತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ, ಉದ್ಯೋಗ ಖಾತರಿ ಸಾಮೂಹಿಕ ಕಾಮಗಾರಿ ಅನುಷ್ಠಾನ ತಂಡದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.