ಪಡುಬಿದ್ರಿ: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಪ್ರಥಮ ಹಂತದಲ್ಲಿ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡಿರುವ ಮಾರಿಯಮ್ಮ ದೇವಿ, ಉಚ್ಚಂಗಿ ದೇವಿ, ಸಮಗ್ರ ದೇವಸ್ಥಾನದ ವಿವಿಧ ಸ್ತಂಭ ಪ್ರತಿಗ್ರಹ ಧಾರ್ಮಿಕ ಕಾರ್ಯಕ್ರಮ ಸೋಮವಾರ ಜರುಗಿತು.
ಕ್ಷೇತ್ರದ ಪ್ರಧಾನ ತಂತ್ರಿ ಕೆ.ಪಿ. ಕುಮಾರಗುರು, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆದವು.
ಬೃಹತ್ ಸ್ತಂಭದ ದಾನಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಉಚ್ಚಂಗಿ ಗುಡಿಯ ಮುಚ್ಚಿಗೆಯ ದಾನಿ ಕರುಣಾಕರ ಶೆಟ್ಟಿ ಪೆನಿನ್ಸುಲಾ, ಮುಖ್ಯ ಮಂಟಪದ ಸ್ತಂಭದ ದಾನಿಗಳಾದ ಸುಜಾತ್ ಶೆಟ್ಟಿ ದುಬೈ, ನಂದಿತಾ ಸುಜಾತ್ ಶೆಟ್ಟಿ ದುಬೈ, ಸುತ್ತುಪೌಳಿಯ ಸ್ತಂಭದ ದಾನಿ ವಳದೂರು ಭಾಸ್ಕರ್ ಶೆಟ್ಟಿ ಖಾಂದೇಶ್, ಪ್ರದಕ್ಷಿಣೆ ಪಥದ ಸ್ತಂಭದ ದಾನಿಗಳಾದ ಸುಜಯ್ ಶೆಟ್ಟಿ ಕಾರ್ಕಳ, ಅಮೃತಾ ಸುಜಯ್ ಶೆಟ್ಟಿ, ಚಿಂತನ್ ರೋಹಿತ್ ಹೆಗ್ಡೆ ಪರವಾಗಿ ಎರ್ಮಾಳು ರೋಹಿತ್ ಹೆಗ್ಡೆ, ವರುಣ್ ಕೆ. ಶೆಟ್ಟಿ ಕಾಪು, ಹಿತೇಶ್ ಕೆ. ಶೆಟ್ಟಿ ಪರವಾಗಿ ಜಯ ಕೆ. ಶೆಟ್ಟಿ, ಕೆ.ಪಿ. ಶೇಖರ್ ಶೆಟ್ಟಿ ಪೂವಣಿಗುತ್ತು ಚಿಕ್ಕಮಗಳೂರು ಅವರು ಸಮರ್ಪಣಾ ದೀಪ ಪ್ರಜ್ವಲಿಸಿದರು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಬೀಡು, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮನೋಹರ ಎಸ್.ಶೆಟ್ಟಿ ಕಾಪು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್ ಸುಂದರ್ ಶೆಟ್ಟಿ, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಅಭಿವೃದ್ಧಿ ಸಮಿತಿ, ಆರ್ಥಿಕ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಸ್ವರ್ಣ ಸಮರ್ಪಣಾ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ, ಪ್ರಚಾರ ಸಮಿತಿ, ಗ್ರಾಮ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು, ಭಕ್ತರು ಇದ್ದರು.
ವಿವಿಧ ಸ್ತಂಭಗಳ ದಾನಿಗಳನ್ನು, ದೇವಸ್ಥಾನದ ಜಾಗದ ಮಾಲೀಕರನ್ನು ಗೌರವಿಸಲಾಯಿತು. 108 ದಿನಗಳ ಪರ್ಯಂತ ನಡೆದ ಭಜನಾ ಕಾರ್ಯಕ್ರಮದ ಮಂಗಲೋತ್ಸವ ದಾನಿಗಳು, ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ನವದುರ್ಗಾ ಲೇಖನ ಯಜ್ಞ ಪೂರ್ವಭಾವಿಯಾಗಿ ಶನಿವಾರ ನಡೆದ ಕುಣಿತ ಭಜನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇಂದಿನ ಕಾರ್ಯಕ್ರಮ: ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಬೆಳಿಗ್ಗೆ 8.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 9.09ಕ್ಕೆ ವಾಗಿಶ್ವರೀ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭವಾಗಲಿದೆ. 10.15ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ನವದುರ್ಗಾ ಲೇಖನ ಬರೆಯುವ ಮೂಲಕ ಪುಸ್ತಕ ಬಿಡುಗಡೆ ಮಾಡುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.