ಸಾವು
ಪ್ರಾತಿನಿಧಿಕ ಚಿತ್ರ
ಕಾಪು (ಪಡುಬಿದ್ರಿ): ಉದ್ಯಾವರದಲ್ಲಿ ಗುರುವಾರ ರಾತ್ರಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಲ್ಲಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಅನಿಲ್ (46) ಮೃತಪಟ್ಟವರು. ಅವರು ಪಿತ್ರೋಡಿಯ ವಾಸು ಎಂಬುವರಿಗೆ ಸೇರಿದ ದೋಣಿಯಲ್ಲಿ ಭರತೇಶ ಎಂಬುವವರೊಂದಿಗೆ ಮೀನಿಗಾರಿಕೆಗೆ ಹೋಗಿದ್ದರು. ಉದ್ಯಾವರ ಗ್ರಾಮದ ಪಿತ್ರೋಡಿ ಎಂಬಲ್ಲಿ ಪಾಪನಾಶಿನಿ ಹೊಳೆಯಲ್ಲಿ ಬಲೆ ಬೀಸುತ್ತಿದ್ದಾಗ ಅನಿಲ್ ಆಯತಪ್ಪಿ ದೋಣಿಯೊಳಗೆ ಅಳವಡಿಸಿದ ವಾಡಿ ಮೇಲೆ ತಲೆ ಕೆಳಗಾಗಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.