ADVERTISEMENT

ಕಾಪು ಪಿಲಿ ಪರ್ಬ: ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 4:35 IST
Last Updated 14 ಅಕ್ಟೋಬರ್ 2024, 4:35 IST
ಕಾಪುವಿನ ರಕ್ಷಣಾಪುರ ಜವನೆರ್ ಆಯೋಜಿಸಿದ್ದ ‘ಕಾಪು ಪಿಲಿ ಪರ್ಬ’ದಲ್ಲಿ ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು
ಕಾಪುವಿನ ರಕ್ಷಣಾಪುರ ಜವನೆರ್ ಆಯೋಜಿಸಿದ್ದ ‘ಕಾಪು ಪಿಲಿ ಪರ್ಬ’ದಲ್ಲಿ ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು   

ಕಾಪು (ಪಡುಬಿದ್ರಿ): ಇಲ್ಲಿನ ರಕ್ಷಣಾಪುರ ಜವನೆರ್ ಸಾರಥ್ಯದಲ್ಲಿ ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ‘ಕಾಪು ಪಿಲಿ ಪರ್ಬ’ದಲ್ಲಿ ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ ಸ್ಥಾನ ಗಳಿಸಿ ₹1 ಲಕ್ಷ ನಗದು ಸಹಿತ ಶಾಶ್ವತ ಫಲಕ ಪಡೆದುಕೊಂಡಿತು.

ದ್ವಿತೀಯ ಸ್ಥಾನ ಪಡೆದ ಕುರ್ಕಾಲು ಟೈರ್‍ಸಗೆ ₹75 ಸಾವಿರ, ಪಡುಬಿದ್ರಿ ಬೇಂಗ್ರೆ ಫ್ರೆಂಡ್ಸ್‌ (ತೃತೀಯ) ₹30 ಸಾವಿರ ನಗದು ಹಾಗೂ ಶಾಶ್ವತ ಫಲಕ ಪಡೆದುಕೊಂಡಿತು. ವೈಯಕ್ತಿಕ ವಿಭಾಗ: ಅತ್ಯುತ್ತಮ ಕರಿ ಹುಲಿ; ಕಾಡಬೆಟ್ಟು ತಂಡದ ಸುಶಾಂತ್, ಅತ್ಯುತ್ತಮ ಹುಲಿ ಕುಣಿತ; ಕುತ್ಯಾರು ಕೇಸರಿ ಟೈರ್‍ಸನ ಅಶ್ವಿತ್, ಅಕ್ಕಿಮುಡಿ ಎಸೆದ ಎಲ್ಲಾ ತಂಡದ ಒಬ್ಬ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಾಹಿತಿ ಟಿ.ಎಸ್.ಹುಸೇನ್, ರಾಷ್ಟ್ರೀಯ ಮ್ಯಾರಥಾನ್ ಪಟು ಸುಲತಾ ಕಾಮತ್ ಕಟಪಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆನಂದ್ ಕೋಟ್ಯಾನ್, ಬಾಲಕೃಷ್ಣ ಟಿ. ಭಂಡಾರಿ, ಜೋಸೆಫ್ ರೆಬೆಲ್ಲೊ, ಸಮಿತಾ ಪೂಜಾರಿ, ರಿದ್ಯಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಸರ್ವಧರ್ಮೀಯರಿಂದ ಉದ್ಘಾಟನೆ: ಕಾಪು ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನದ ಅರ್ಚಕ ಕೆ.ಪಿ.ಶ್ರೀನಿವಾಸ್ ತಂತ್ರಿ, ಶಂಕರಪುರ ಚರ್ಚಿನ ಧರ್ಮಗುರು ರೆವೆರೆಂಡ್ ಫಾದರ್ ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಜಮೀಯತುಲ್ ಫಲಾಹ ಕಾಪು ವಲಯ ಅಧ್ಯಕ್ಷ ಶಭಿ ಅಹ್ಮದ್ ಖಾಝಿ, ಹುಲಿ ಕೋಲ ನರ್ತಕ ಗುಡ್ಡ ಪಾನರ ಮತ್ತು ಧರ್ಮದರ್ಶಿ ಸತೀಶ್ ಬಂದಲೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ಅಶೋಕ್ ಕುಮಾರ್ ಕೊಡವೂರ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾರ್‌ರಾಜ್ ಕಾಂಚನ್, ಕಾಪು ದಿವಾಕರ್ ಶೆಟ್ಟಿ, ವಿಕ್ರಂ ಕಾಪು, ನವೀನ್‌ಚಂದ್ರ ಜೆ. ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲ್, ಚಂದ್ರಹಾಸ್ ಶೆಟ್ಟಿ ಪುತ್ತೂರು, ವೈ.ಸುಕುಮಾರ್, ರಮೇಶ್ ಕಾಂಚನ್, ಶಿವಾಜಿ ಸುವರ್ಣ, ಜಿತೇಂದ್ರ ಫುರ್ಟಾಡೊ, ಶರ್ಫುದ್ದಿನ್ ಶೇಖ್, ದೀಪಕ್ ಎರ್ಮಾಳ್, ಶೇಖರ್ ಹೆಜಮಾಡಿ, ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ರಾಜೇಶ್ ರಾವ್ ಪಾಂಗಾಳ, ನಿರಂಜನ್ ಶೆಟ್ಟಿ, ಸುನಿಲ್ ಡಿ. ಬಂಗೇರ, ದ್ವಿಶನ್ ಸೊರಕೆ, ಗುಲಾಂ ಅಹ್ಮದ್, ಹರಿಪ್ರಸಾದ್ ರೈ ಕೊಡಿಮ್ಬಾಡಿ, ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಗಣನಾಥ ಹೆಗ್ಡೆ, ಮಾಧವ ಪಾಲನ್, ಅಖಿಲೇಶ್ ಕೋಟ್ಯಾನ್, ಲಕ್ಷ್ಮೀಶ ತಂತ್ರಿ, ರಮೀಜ್ ಹುಸೇನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ, ಪ್ರಭಾಕರ್ ಕೈಪುಂಜಾಲ್, ಸತೀಶ್ ಚಂದ್ರ ಮೂಳೂರು, ಗೀತಾ ವಾಗ್ಲೇ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.