ADVERTISEMENT

ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದ ನೆರವು ಅಗತ್ಯ: ಸುನಿಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:58 IST
Last Updated 4 ಡಿಸೆಂಬರ್ 2025, 7:58 IST
<div class="paragraphs"><p>ಮಹಾಮಸ್ತಕಾಭಿಷೇಕ</p></div>

ಮಹಾಮಸ್ತಕಾಭಿಷೇಕ

   

ಕಾರ್ಕಳ: 12 ವರ್ಷಗಳಿಗೊಮ್ಮೆ ನಡೆಯುವ ಗೊಮ್ಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ 2027ರ ಜನವರಿಯಲ್ಲಿ ನಡೆಯಲಿದ್ದು, ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರದ ನೆರವು ಅಗತ್ಯ ಎಂದು ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಮಹಾಭಿಷೇಕಕ್ಕೆ ದೇಶ ವಿದೇಶಗಳಿಂದ ಆನೇಕ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಬರುವ ಕಾರಣ ಕಾರ್ಕಳ ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳು, ನಗರದ ಎಲ್ಲ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ವಿದ್ಯುತ್‌ ದೀಪಗಳ ಅಳವಡಿಕೆ ಯಾತ್ರಾರ್ಥಿಗಳ ಅನುಕೂಲಕ್ಕೆ ಯಾತ್ರಿ ನಿವಾಸ, ಅನ್ನ ಛತ್ರ ಒಳಗೊಂಡ ಸಭಾಭವನ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ.

ADVERTISEMENT

ಕಾರ್ಕಳ ಗೊಮ್ಮಟ ಬೆಟ್ಟದ ಬಳಿ ಮತ್ತು ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಬಳಿ ಮತ್ತು ವರಂಗ ಜೈನ ಬಸದಿ ಬಳಿ ಸಭಾ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಾರ್ಕಳ ಮಹಾಮಸ್ತಕಾಭಿಷೇಕದ ಪೂರ್ವಭಾವಿ ತಯಾರಿ ಆರಂಭಗೊಂಡಿವೆ ಎಂದು ಶಾಸಕರ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.