ADVERTISEMENT

ಕಾರ್ಕಳ: ಅಪಘಾತದಲ್ಲಿ ತೆಲಂಗಾಣ ಶಾಸಕ ಪಾರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 16:13 IST
Last Updated 24 ಜೂನ್ 2023, 16:13 IST

ಕಾರ್ಕಳ: ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ತೆಲಂಗಾಣ ಶಾಸಕ ಪಂಜುಗುಳಿ ರೋಹಿತ್ ರೆಡ್ಡಿ ಅವರ ಜೀಪ್‌ಗೆ ದನ ಅಡ್ಡಬಂದಿದ್ದರಿಂದ ಜೀಪು ಮರಕ್ಕೆ ಡಿಕ್ಕಿಯಾದ ಘಟನೆ ತಾಲ್ಲೂಕಿನ ಮಿಯ್ಯಾರು ಸೇತುವೆ ಸಮೀಪ ಮುಡಾರು- ನಲ್ಲೂರು ಕ್ರಾಸ್‌ನಲ್ಲಿ ಸಂಭವಿಸಿದೆ.

ಚಾಲಕನ ಸಮಯ ಪ್ರಜ್ಞೆಯಿಂದ ವಾಹನದಲ್ಲಿ‌ದ್ದ ಶಾಸಕರಿಗೆ ಗಾಯಗಳಾಗಿಲ್ಲ. ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುವೆ ಸಿಲುಕಿದ ಜೀಪು ಜಖಂಗೊಂಡಿದೆ. ನಂತರ ಕಾರ್ಕಳ ಪೊಲೀಸರ ಸಹಕಾರದಲ್ಲಿ ಶಾಸಕರು ಪ್ರತ್ಯೇಕ ವಾಹನದಲ್ಲಿ ಶೃಂಗೇರಿ ಕಡೆಗೆ ಪ್ರಯಾಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT