ಪ್ರಾತಿನಿಧಿಕ ಚಿತ್ರ
ಕಾರ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆ. 17ರಂದು ಕಾರ್ಕಳ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಹೆಸರು ನೋಂದಾಯಿಸಲು 14 ಕೊನೆಯ ದಿನ.
ಪುರುಷರಿಗೆ
ಅಥ್ಲೆಟಿಕ್ಸ್– 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೊ, ಡಿಸ್ಕಸ್ ಥ್ರೊ, 110 ಮೀ ಹರ್ಡಲ್ಸ್, 100 ಮೀ. ರಿಲೇ, 4*400 ಮೀ ರಿಲೇ
ಗುಂಪು ಆಟಗಳಾದ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಫುಟ್‌ಬಾಲ್, ಥ್ರೋಬಾಲ್ ಪಂದ್ಯ ನಡೆಯಲಿವೆ. ಫುಟ್‌ಬಾಲ್ ಟೂರ್ನಿ 16ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9ಕ್ಕೆ ವರದಿ ಮಾಡಿಕೊಳ್ಳಬಹುದು.
ಮಹಿಳೆಯರಿಗೆ
ಅಥ್ಲೆಟಿಕ್ಸ್– 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೊ, ಡಿಸ್ಕಸ್ ಥ್ರೊ, 100 ಮೀ ಹರ್ಡಲ್ಸ್, 4*100 ಮೀ ಮತ್ತು 4*400 ಮೀ ರಿಲೇ
ಗುಂಪು ಆಟಗಳಾದ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್ ಟೂರ್ನಿ ನಡೆಯಲಿವೆ.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹ. ಕ್ರೀಡಾಕೂಟ ನಡೆಯುವ ದಿನ ನೋಂದಣಿಗೆ ಅವಕಾಶವಿಲ್ಲ. ಮಾಹಿತಿಗೆ ಕಾರ್ಕಳ ತಾಲ್ಲೂಕು ಯುವಜನ ಕ್ರೀಡಾಧಿಕಾರಿ– 9008857495 ಸಂಪರ್ಕಿಸಬಹುದು ಎಂದು ತಾಲ್ಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.