ADVERTISEMENT

ಉತ್ಸವಗಳು ಅರ್ಥಿಕ ಚಟುವಟಿಕೆಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 4:38 IST
Last Updated 31 ಜನವರಿ 2023, 4:38 IST
ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಡೆದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೋಪ ಸಮಾರಂಭದಲ್ಲಿ ಕಾರ್ಕಳ ಕುರಿತು ರಾಜ್ಯ ಗ್ಯಾಜೆಟಿಯರ್ ಬಿಡುಗಡೆಗೊಳಿಸಲಾಯಿತು
ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದಲ್ಲಿ ನಡೆದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೋಪ ಸಮಾರಂಭದಲ್ಲಿ ಕಾರ್ಕಳ ಕುರಿತು ರಾಜ್ಯ ಗ್ಯಾಜೆಟಿಯರ್ ಬಿಡುಗಡೆಗೊಳಿಸಲಾಯಿತು   

ಕಾರ್ಕಳ: ಉತ್ಸವಗಳು ಅರ್ಥಿಕ ಚಟು ವಟಿಕೆಗೆ ನೆರವಾಗುತ್ತವೆ. ಕಾರ್ಕಳವನ್ನು ಬ್ರ್ಯಾಂಡ್ ಆಗಿಸಬೇಕು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಬೈಲೂರು ಉಮಿಕಲ್ ಬೆಟ್ಟದಲ್ಲಿ ನಡೆದ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೊರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಅವರು ಕ್ಷೇತ್ರದ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆಯುತ್ತಿದೆ. ವಾರಾಹಿ ಯೋಜನೆಯ ಮೂಲಕ 46 ಸಾವಿರ ಮನೆಗಳಿಗೆ ಕುಡಿಯುವ ನೀರಿನ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ತಾಲ್ಲೂಕಿನ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗುವಂತೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಕಾರ್ಕಳ ಕುರಿತ ಗೆಜೆಟಿಯರ್ ಬಿಡುಗಡೆಗೊಳಿಸಲಾಯಿತು. ಸಂಪಾದಕಿ ಎ. ರಾಜಮ್ಮ ಚೌಡರೆಡ್ಡಿ ಇದ್ದರು.

ಶಾಸಕರಾದ ಮಂಜುನಾಥ್ ಭಂಡಾರಿ, ಹರೀಶ್ ಪೂಂಜ, ಜಿಲ್ಲಾಧಿಕಾರಿ ಕೂರ್ಮಾರಾವ್, ಮುನಿ ಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ADVERTISEMENT

ಗೇರು ನಿಗಮದ ಅಧ್ಯಕ್ಷ ಮಣಿ ರಾಜ ಶೆಟ್ಟಿ, ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚೀಂದ್ರ, ಉದ್ಯಮಿ ಎಸ್. ಹುರ್ಲಾಡಿ ರಘುವೀರಶೆಟ್ಟಿ, ಸುಧೀರ್ ಹೆಗ್ಡೆ ಬೈಲೂರು, ತೆಳ್ಳಾರು ಗಿರೀಶ್ ಶೆಟ್ಟಿ ಇದ್ದರು. ನಿರ್ಮಿತಿ ಕೇಂದ್ರದ ಸುಪ್ರಿತ್ ರಾವ್, ದೀಕ್ಷಿತ್, ಸಚಿನ್ ಕುಮಾರ್, ಗೌತಮ್, ವಿನ್ಯಾಸಕಾರ ಪುರುಷೋತ್ತಮ ಅಡ್ವೆ, ದೇವಾನಂದ, ಅನಿಲ್, ಸದಾಶಿವ ಆಚಾರ್, ಮೂರ್ತಿ ನಿರ್ಮಾತೃ ಕೃಷ್ಣ ನಾಯ್ಕ್ ತಂಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ರಮ್ಯಾ ಸುಧೀಂದ್ರ ಪ್ರಾರ್ಥಿಸಿದರು. ನವೀನ್ ನಾಯಕ್ ಸ್ವಾಗತಿಸಿದರು. ಸದಾನಂದ ಸಾಲಿಯಾನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.