ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯ ಬೈಂದೂರಿನ ಜ್ಯೋತಿಕಾ ಅವರು ಕರ್ನಾಟಕ ಕ್ರೀಡಾಕೂಟದ ಐದನೇ ದಿನವಾದ ಮಂಗಳವಾರ ನಡೆದ ಅಥ್ಲೆಟಿಕ್ಸ್ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಜ್ಯೋತಿಕಾ 24 ನಿ. 72 ಸೆ.ಗಳಲ್ಲಿ ಗುರಿ ತಲುಪಿದರೆ, ಉಡುಪಿಯ ಸ್ತುತಿ ಶೆಟ್ಟಿ ಎರಡನೇ ಸ್ಥಾನ ಗಳಿಸಿದರು. ಮೈಸೂರಿನ ಮಮತಾ ಎಂ. ಅವರು ಮೂರನೇ ಸ್ಥಾನ ಪಡೆದರು.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ 4X100 ಮೀ. ಮತ್ತು 4X400 ಮೀ. ರಿಲೇ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿರುವ ಜ್ಯೋತಿಕಾ ಬೆಂಗಳೂರಿನ ಜೈನ್ ಕಾಲೇಜಿನ ಎಂ.ಕಾಂ. ದ್ವಿತೀಯ ವರ್ಷದ ವಿದ್ಯಾರ್ಥಿನಿ.
ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಯಾದಗಿರಿಯ ರಾಥೋಡ್ ಲೋಕೇಶ್ ದಾಮು 15 ನಿಮಿಷ 3 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲಿಗರಾದರು. ದಕ್ಷಿಣ ಕನ್ನಡದ ತಾಜಲ್ ಕೆ.ಆರ್. ಎರಡನೇ ಸ್ಥಾನ ಗಳಿಸಿದರು. ಬೆಂಗಳೂರಿನ ಸಂತೋಷ್ ಕುಮಾರ್ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟರು.
ಯಾದಗಿರಿ ಜಿಲ್ಲೆ ಶಹಾಪುರದ ಬಿ.ಎನ್. ತಾಂಡಾದ ರಾಥೋಡ್ ಲೋಕೇಶ್ ದಾಮು ಅವರು ಡೆಕಾಥ್ಲಾನ್ ಆಟಗಾರರಾಗಿದ್ದು, ರಾಜ್ಯಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ವಿಭಾಗಳಲ್ಲಿ ಏಳು ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಎಮ್ಮೆಕೆರೆಯ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಈಜು ಸ್ಪರ್ಧೆ ಎರಡನೇ ದಿನ ದಕ್ಷಿಣ ಕನ್ನಡ ಜಿಲ್ಲೆಯ ಚಿಂತನ್ ಶೆಟ್ಟಿ ನಾಲ್ಕನೇ ಚಿನ್ನ ಗೆದ್ದುಕೊಂಡರು.
ಫಲಿತಾಂಶಗಳು: ಅಥ್ಲೆಟಿಕ್ಸ್: ಪುರುಷರ ವಿಭಾಗ: 10 ಸಾವಿರ ಮೀ. ಓಟ: ವಿಜಯ ಸವರಾತ್ಕರ್ (ಬೆಳಗಾವಿ)-1. ಕಾಲ: 23ನಿ. 35.78 ಸೆ, ಗುರುಪ್ರಸಾದ್ (ಬೆಂಗಳೂರು)-2, ಸಂದೀಪ್ (ಬೆಂಗಳೂರು)-3; 800 ಮೀ. ಓಟ: ಕಮಲಕಣ್ಣನ್ ಎಸ್.(ಬೆಂಗಳೂರು)–1. ಕಾಲ: 1 ನಿ. 52.92 ಸೆ., ಲೋಕೇಶ್ ಕೆ. (ರಾಮನಗರ)–2, ವಿನಾಯಕ ಅಂಗಡಿ (ಬೆಂಗಳೂರು)–3; 200 ಮೀ. ಓಟ: ಗುರುಪ್ರಸಾದ್ (ಮೈಸೂರು)–1. ಕಾಲ: 21ನಿ. 43 ಸೆ., ಪ್ರಸನ್ನ ಕುಮಾರ್ (ಬೆಂಗಳೂರು)–2, ಧನುಷ್ ಡಿ. (ಉಡುಪಿ)–3; ಡಿಸ್ಕಸ್ ಥ್ರೋ: ಮೊಹಮ್ಮದ್ ಸಕ್ಲೈನ್ (ಮೈಸೂರು)–1.ದೂರ: 52.36 ಮೀ., ನಾಗೇಂದ್ರ ಎ. ನಾಯ್ಕ್ (ಉ.ಕ)–2, ಮೋಹಿತ್ ಎನ್. ರಾಜ್ (ಮೈಸೂರು)–3; ಲಾಂಗ್ ಜಂಪ್: ಜಾಫರ್ ಖಾನ್ (ಬೆಳಗಾವಿ)–1. ಅಂತರ: 7.44 ಮೀ., ಅನುಷ್ ಟಿ.ಆರ್. (ಉಡುಪಿ)–2, ಸುಶಾನ್ ಜಿ. ಸುವರ್ಣ (ಬೆಂಗಳೂರು)–3; ಪೋಲ್‌ವಾಲ್ಟ್: ರಾಹುಲ್ ಅಶೋಕ್ ನಾಯ್ಕ್ (ಮೈಸೂರು)–1. ಎತ್ತರ: 4.20 ಮೀ., ಆದಿತ್ಯ ವಿ.ಎಂ. (ಬೆಂಗಳೂರು)–2, ಲೋಕೇಶ್ ರಾಥೋಡ್ (ಯಾದಗಿರಿ)–3.
ಮಹಿಳೆಯರು: 800 ಮೀ. ಓಟ: ವಿಜಯ ಕುಮಾರಿ ಜಿ.ಕೆ. (ಬೆಂಗಳೂರು)–1. ಕಾಲ: 2 ನಿ.14.02 ಸೆ, ದೀಪಾಶ್ರೀ (ದಕ್ಷಿಣ ಕನ್ನಡ)–2, ರೇಖಾ ಬಸಪ್ಪ ಪಿರೋಜಿ (ದ.ಕ.)–3; 100 ಮೀ. ಹರ್ಡಲ್ಸ್: ಇಶಾ ಎಲಿಜಬೆತ್ (ಬೆಂಗಳೂರು)–1. ಕಾಲ: 14ನಿ.58 ಸೆ., ದೀಕ್ಷಿತಾ (ದ.ಕ.)–2, ರಕ್ಷಿತಾ (ಉಡುಪಿ)–3; ಶಾಟ್‌ಪಟ್: ಅಂಬಿಕಾ ವಿ.(ಮೈಸೂರು)–1, ದೂರ: 14.53 ಮೀ., ಬೃಂದಾ ಎಸ್. (ಮೈಸೂರು)–2, ಮಾಧುರ್ಯ (ಉಡುಪಿ)–3; ಜಾವೆಲಿನ್ ಥ್ರೋ: ಶ್ರಾವ್ಯಾ (ಉಡುಪಿ)–1.ದೂರ–40.62 ಮೀ., ಜೀವಿತಾ ಡಿ. (ದ.ಕ.)–2, ಸಿಂಚನಾ (ದ.ಕ.)–3; ಲಾಂಗ್ ಜಂಪ್: ಪವಿತ್ರಾ ಜಿ. (ಉಡುಪಿ)–1. ಅಂತರ: 5.56 ಮೀ., ಐಶ್ವರ್ಯ ಪಾಟೀಲ್ (ದ.ಕ.)–2, ಶ್ರೀದೇವಿಕಾ ವಿ.ಎಸ್. (ಉಡುಪಿ)–3.
ಈಜು: ಪುರುಷರು: 200 ಮೀ. ಫ್ರೀಸ್ಟೈಲ್: ಚಿಂತನ್ ಶೆಟ್ಟಿ (ದ.ಕ.)–1, ಕಾಲ: 2 ನಿ.0.90 ಸೆ; ಧೋನೀಶ್ ಎನ್ (ಬೆಂಗಳೂರು)–2; ಅಲೆಸ್ಟರ್ ಸ್ಯಾಮ್ಯುವಲ್ ರೇಗೊ–3; 200 ಮೀ. ಬ್ರೆಸ್ಟ್ ಸ್ಟ್ರೋಕ್; ಸೂರ್ಯ ಜೋಯಪ್ಪ ಒಡಿಯಾಂಡ ರಾಜೇಶ್ (ಬೆಂ. ದಕ್ಷಿಣ)–1,ಕಾಲ:1 ನಿ. 12.46ಸೆ.; ನಿಶಾನ್ (ಮಂಗಳೂರು)–2; ಅಲೆಸ್ಟರ್ ಸ್ಯಾಮ್ಯುವಲ್ ರೇಗೊ–3; 1500 ಮೀ. ಫ್ರೀಸ್ಟೈಲ್: ಧ್ರುವ ಬಿ (ಬೆಂಗಳೂರು)–1, ಕಾಲ: 18 ನಿ.06.58 ಸೆ; ಸಚಿನ್ ವಿಶ್ವನಾಥ್ (ಬೆಂಗಳೂರು)–2; ನಿಶಾನ್ (ಮಂಗಳೂರು)–3; 200 ಮೀ ಬಟರ್ ಫ್ಲೈ; ಹರ್ಷವರ್ಧನ (ಬೆಂಗಳೂರು)–1, ಕಾಲ: 2 ನಿ. 24.90 ಸೆ; ಸ್ಟೀವ್ ಜೆಫ್ ಲೋಬೊ (ಮಂಗಳೂರು)–2, ಈಥನ್ ಪೌಲ್ ಮಸ್ಕರೇನ್ಹಸ್ (ಮಂಗಳೂರು)–3; 50 ಮೀ ಬ್ಯಾಕ್‌ಸ್ಟ್ರೋಕ್: ಧ್ಯಾನ್ ಎಂ (ಬೆಂಗಳೂರು)–1, ಕಾಲ: 28.53 ಸೆ; ದಿಗಂತ್ ವಿ.ಎಸ್ (ದ.ಕ.)–2, ಗ್ಯಾನ್ ಡಿ (ದ.ಕ.)–3;4x100 ಮೀ ರಿಲೆ ಫ್ರೀಸ್ಟೈಲ್: ಮಂಗಳೂರು–1, ಕಾಲ: 3ನಿ. 55.18 ಸೆ; ಪುತ್ತೂರು ಎಸಿ–2; ಬಿಎಸಿ–3;
ಮಹಿಳೆಯರು: 200 ಮೀ. ಫ್ರೀಸ್ಟೈಲ್: ಪ್ರಧಿ ಕ್ಲೇರ್ ಪಿಂಟೊ (ದ.ಕ)–1; ಕಾಲ: 2 ನಿ. 41.37 ಸೆ; ಅಂಕಿತಾ ಯು (ದ.ಕ.)–2, ನಮ್ರತಾ ಶೆಟ್ಟಿ (ದ.ಕ)–3; 100 ಮೀ. ಬ್ರೆಸ್ಟ್ ಸ್ಟ್ರೋಕ್; ಎಸ್.ಆರ್.ರಚನಾ ರಾವ್ (ದ.ಕ.)–1, ಕಾಲ: 1ನಿ.20.65 ಸೆ; ರಿಯಾನ ಧೃತಿ ಫರ್ನಾಂಡಿಸ್ (ದ.ಕ.)–2, ಪ್ರತೀಕ್ಷಾ ಎನ್.ಶೆಣೈ (ದ.ಕ.)–3; 1500 ಮೀ. ಫ್ರೀಸ್ಟೈಲ್: ನಮ್ರತಾ ಶೆಟ್ಟಿ (ದ.ಕ.)–1, ಕಾಲ: 30 ನಿ. 09.63 ಸೆ; 50 ಮೀ ಬ್ಯಾಕ್‌ಸ್ಟ್ರೋಕ್: ತನ್ಮಯಿ ಧರ್ಮೇಶ್ (ಬೆಂಗಳೂರು)–1, ಕಾಲ: 33.73 ಸೆ; ಪ್ರಧಿ ಕ್ಲೇರ್ ಪಿಂಟೊ (ದ.ಕ.)–2, ಪ್ರತೀಕ್ಷಾ ಎನ್.ಶೆಣೈ (ದ.ಕ.)–3;
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.