ADVERTISEMENT

ಕಿದಿಯೂರು ಲಾರ್ಡ್ಸ್‌ ವಸತಿಯುತ ಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 15:35 IST
Last Updated 8 ಫೆಬ್ರುವರಿ 2023, 15:35 IST
ಭುವನೇಂದ್ರ ಕಿದಿಯೂರು
ಭುವನೇಂದ್ರ ಕಿದಿಯೂರು   

ಉಡುಪಿ: ಕಿದಿಯೂರು ಎಜುಕೇಷನಲ್‌ ಟ್ರಸ್ಟ್‌ನಿಂದ ನಿಟ್ಟೂರಿನಲ್ಲಿ ಕಿದಿಯೂರು ಲಾರ್ಡ್ಸ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಷಿಯಲ್‌ ಶಾಲೆಯನ್ನು ಆರಂಭಿಸಲಾಗಿದೆ ಎಂದು ಉದ್ಯಮಿ ಹಾಗೂ ಟ್ರಸ್ಟ್ ಅಧ್ಯಕ್ಷ ಭುವನೇಂದ್ರ ಕಿದಿಯೂರು ತಿಳಿಸಿದರು.

ಬುಧವಾರ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡಲು ಕಿದಿಯೂರು ಲಾರ್ಡ್ಸ್‌ ಶಾಲೆ ಸ್ಥಾಪಿಸಲಾಗಿದೆ.

4 ಎಕರೆ ವಿಶಾಲವಾದ ಪ್ರದೇಶದಲ್ಲಿ ವಸತಿ ಸಹಿತ ಸುಸಜ್ಜಿತ ಶಾಲೆ ತಲೆ ಎತ್ತಿದೆ. ಮಾರ್ಚ್‌ ಮೊದಲ ವಾರದಿಂದ 5, 6 ಹಾಗೂ 7ನೇ ತರಗತಿಗೆ ದಾಖಲಾತಿ ಆರಂಭವಾಗಲಿದ್ದು, ಜೂನ್‌ನಿಂದ ತರಗತಿಗಳು ಶುರುವಾಗಲಿದ್ದು, ಆಸಕ್ತರು ಸಂಪರ್ಕಿಸಬಹುದು ಎಂದರು.

ADVERTISEMENT

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌ ಸಂಯೋಜಿತ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಐಸಿಎಸ್‌ಸಿ ಪಠ್ಯಕ್ರಮವನ್ನು ಶಾಲೆಯಲ್ಲಿ ಬೋಧಿಸಲಾಗುವುದು. ಇಂಗ್ಲೀಷ್ ಪ್ರಥಮ ಭಾಷೆಯಾಗಿರಲಿದ್ದು ಕೋರ್ ವಿಷಯಗಳ ಆಯ್ಕೆಯ ಜತೆಗೆ ಕನ್ನಡ, ಹಿಂದಿ, ಫ್ರೆಂಚ್‌, ಹಾಗೂ ಸಂಸ್ಕೃತವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಯಲು ಅವಕಾಶವಿದೆ.

ಈಜು, ಸಂಗೀತ, ಕ್ರೀಡೆ, ಕರಾಟೆ, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್, ರೊಬೊಟಿಕ್ಸ್‌, ಕೋಡಿಂಗ್ ಕೌಶಲಗಳನ್ನು ಮಕ್ಕಳಿಗೆ ಕಲಿಸಲಾಗುವುದು. ಕೆವಿವೈಪಿ, ಎನ್‌ಟಿಎಸ್‌ಇ, ಸಿಪಿಟಿ, ಸಿಎ, ನೀಟ್, ಜೆಇ, ಎನ್‌ಡಿಎ, ಸಿಎಲ್‌ಎಟಿ, ಟಿಒಇಎಫ್‌ಎಲ್‌, ಐಇಎಲ್‌ಟಿಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು.

ಪ್ರತ್ಯೇಕ ಹಾಸ್ಟೆಲ್‌, ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ, ಕೌನ್ಸೆಲಿಂಗ್, ಭದ್ರತೆ, ಲಾಂಡ್ರಿ, ಎಸಿ ಕೊಠಡಿಗಳ ಸೌಲಭ್ಯ ಇರಲಿದೆ. ಪ್ರತಿ ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಯುವರಾಜ್ ಕಿದಿಯೂರು, ಮಲ್ಲಿಕಾ ಯುವರಾಜ್, ಡೇನಿಯಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.