ಕೋಟ (ಬ್ರಹ್ಮಾವರ): ತಾಂತ್ರಿಕ ಸಮಸ್ಯೆಯಿಂದ ಬೋಟೊಂದು ದಡಕ್ಕೆ ಅಪ್ಪಳಿಸಿ, ಹಾನಿಗೀಡಾದ ಘಟನೆ ಹಂಗಾರಕಟ್ಟೆ ಸಮೀಪ ನಡೆದಿದೆ.
ಕೋಡಿಬೆಂಗ್ರೆಯ ಪ್ರಕಾಶ ಕುಂದರ್ ಅವರಿಗೆ ಸೇರಿದ ‘ಮಹಾಕಾಳಿ’ ಹೆಸರಿನ ಬೋಟ್ ಸೆ.17ರಂದು ಬೆಳಿಗ್ಗೆ ಕೋಡಿಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಮಧ್ಯಾಹ್ನ ಹಂಗಾರಕಟ್ಟೆ ಬಂದರಿನ ಸಮೀಪ ಮೀನುಗಾರಿಕೆ ಮಾಡುತ್ತಿದ್ದಾಗ ತಾಂತ್ರಿಕ ಸಮಸ್ಯೆಯಿಂದ ಎಂಜಿನ್ ಬಂದ್ ಆಗಿತ್ತು. ಗಾಳಿ ಮತ್ತು ಅಲೆಗಳ ರಭಸಕ್ಕೆ ಬೋಟ್ ತೀರಕ್ಕೆ ಬಂದು ಕೋಡಿ ಕನ್ಯಾನ ಗ್ರಾಮದ ಕೋಡಿ ಸಮುದ್ರಬದಿ ದಡಕ್ಕೆ ಅಪ್ಪಳಿಸಿತು. ಬೋಟ್‌ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ.
ಬೋಟ್ ಮತ್ತು ಸಾಮಗ್ರಿಗಳಿಗೆ ಹಾನಿಯಾಗಿದ್ದು, ಸುಮಾರು ₹10 ಲಕ್ಷಕ್ಕೂ ನಷ್ಟ ಉಂಟಾಗಿದೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.