ADVERTISEMENT

ಉಡುಪಿ | ಕೊಕ್ಕರ್ಣೆ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಭಾರತೀಯ ಜೀವ ವಿಮಾ ನಿಗಮದ ಗೌರವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 6:58 IST
Last Updated 3 ಡಿಸೆಂಬರ್ 2022, 6:58 IST
ಭಾರತೀಯ ಜೀವ ವಿಮಾ ನಿಗಮದ ‍ಪ್ರಶಸ್ತಿಯೊಂದಿಗೆ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಂಭ್ರಮ
ಭಾರತೀಯ ಜೀವ ವಿಮಾ ನಿಗಮದ ‍ಪ್ರಶಸ್ತಿಯೊಂದಿಗೆ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಂಭ್ರಮ   

ಕೊಕ್ಕರ್ಣೆ(ಬ್ರಹ್ಮಾವರ): ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ 14 ವಿದ್ಯಾರ್ಥಿಗಳಿಗೆ ಭಾರತೀಯ ಜೀವ ವಿಮಾ ನಿಗಮದ ಬ್ರಹ್ಮಾವರ ಶಾಖೆಯ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿದೆ.

ಪ್ರಶಸ್ತಿ ವಿತರಿಸಿ ಮಾತನಾಡಿದ ಜೀವ ವಿಮಾ ನಿಗಮ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಪ್ರದೀಪ್ ಎಲ್‌ಐಸಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಈ ಶಾಲೆಯನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ವಿಮಾ ಶಾಲೆಯನ್ನಾಗಿ ಮಾಡಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಇದಕ್ಕೆ ಪೋಷಕರು ಸಹಕರಿಸಬೇಕು ಎಂದು ಕೋರಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಉದಯ ನಾಯಕ್, ಉಪ ಶಾಖಾಧಿಕಾರಿ ರಾಮ, ಅವಾರ್ಡ್‌ ಕೊಡಿಸುವಲ್ಲಿ ಸಹಕರಿಸಿದ ಶಾಲಾ ಹಳೆ ವಿದ್ಯಾರ್ಥಿ ಶಂಕರ್ ಕಾಮತ್ ಕೊಕ್ಕರ್ಣೆ, ಎಸ್.ಡಿ.ಎಂ ಸಿ ಸದಸ್ಯರು, ಶಿಕ್ಷಕ ವೃಂದ, ಪೋಷಕರು ಇದ್ದರು.

ADVERTISEMENT

ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿದರು. ಸಹ ಶಿಕ್ಷಕಿ ಆಶಾಕಿರಣ ವಂದಿಸಿದರು.

ಶಾಲೆಯ ಸಹ ಶಿಕ್ಷಕ ಭಾಸ್ಕರ ಪೂಜಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.