ಬ್ರಹ್ಮಾವರ: ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಶುಕ್ರವಾರ ನಾಮಸೂಚಕ ಹಬ್ಬ (ತಾರೀಖಿನ ಹಬ್ಬ) ಸಡಗರದಿಂದ ಆಚರಿಸಲಾಯಿತು.
ಬಲಿಪೂಜೆ ಮೂಲಕ ಹಬ್ಬದ ಆಚರಣೆ ನೆರವೇರಿಸಲಾಯಿತು. ನೂತನವಾಗಿ ಯಾಜಕ ದೀಕ್ಷೆ ಪಡೆದ ಒಸ್ವಲ್ಡ್ ವಾಜ್, ಸಹ ಯಾಜಕರಾಗಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಮಿಲಾಗ್ರಿಸ್ ಕೆಥೆಡ್ರಲ್‌ನ ರೆಕ್ಟರ್ ಫರ್ಡಿನಾಂಡ್, ಗೊನ್ಸಾಲ್ವಿಸ್, ಚರ್ಚ್‌ನ ಧರ್ಮಗುರು ಜೋಸೆಫ್ ಮಾಚಾದೊ ಪವಿತ್ರ ಬಲಿಪೂಜೆ ನೆರವೇರಿಸಿದರು.
ಸಾವಿರಾರು ಭಕ್ತರು ಭಾಗವಹಿಸಿದ್ದರು. ದಿ.ಪೆಲಿಕ್ಸ್ ಡಿಸೋಜ ಪತ್ನಿ ಗ್ರೇಸಿ ಡಿಸೋಜ ಮತ್ತು ಮಕ್ಕಳು ಹಬ್ಬದ ಪ್ರಾಯೋಜಕತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.