ADVERTISEMENT

ಹೆಬ್ರಿ| ರಸ್ತೆ ಸಂಪರ್ಕ ಕಡಿತ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 12:36 IST
Last Updated 17 ಜೂನ್ 2025, 12:36 IST
ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ಕಂಚರ್ಕಳ್‌ ಎಂಬಲ್ಲಿ ಸಂಪರ್ಕ ಕಡಿತಗೊಂಡಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ಕಂಚರ್ಕಳ್‌ ಎಂಬಲ್ಲಿ ಸಂಪರ್ಕ ಕಡಿತಗೊಂಡಿದ್ದು, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಹೆಬ್ರಿ: ಹೆಬ್ರಿ– ಮಡಾಮಕ್ಕಿ ಮೂಲಕ ಕೊಲ್ಲೂರು ಸಂರ್ಪಕಿಸುವ ಹೆಬ್ರಿ– ಕುಚ್ಚೂರು– ಮಡಾಮಕ್ಕಿ ರಸ್ತೆಯ ಸಂಪರ್ಕ ಕಡಿತಗೊಂಡು ಹೆಬ್ರಿಗೆ ಬರುವ ಹಲವು ಗ್ರಾಮಗಳ ಜನರು ಸುತ್ತು ಬಳಸಿ ಬರಬೇಕಾದ ಸಂಕಷ್ಟ ಎದುರಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್‌ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. 

ಮಂಗಳವಾರ ಹೆಬ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಳೆಗಾಲದ ಆರಂಭದಲ್ಲೇ ಹಳೆಸೇತುವೆ ಕೆಡವಿ ಹೊಸ ಸೇತುವೆ ಮಾಡಲು ಹೊರಟಿದ್ದೀರಿ. ಅದಕ್ಕಾಗಿ ಬದಲಿ ವ್ಯವಸ್ಥೆ ಮಾಡಿರುವ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ. ವಿದ್ಯಾರ್ಥಿಗಳು, ಗ್ರಾಮಸ್ಥರು ಬಹುದೂರದಿಂದ ಹೆಬ್ರಿಗೆ ಬರಬೇಕಿದೆ. ನಿಮಗೆ ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಿಸಬಹುದಿತ್ತಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

₹2 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೀರಿ. ಹೆಬ್ರಿ– ಕುಚ್ಚೂರು– ಮಡಾಮಕ್ಕಿ ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ 10 ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ಹೆಬ್ರಿಗೆ ಆ ಗ್ರಾಮದವರು ಬರಬೇಕಾದರೆ 10– 12 ಕಿ.ಮೀ ಸುತ್ತಿ ಬಳಸಿ ಬರಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಮಿಥುನ್‌, ಈ ಬಾರಿ ಮಳೆಗಾಲ ಬೇಗ ಶುರುವಾಗಿದ್ದರಿಂದ ಸಮಸ್ಯೆಯಾಗಿದೆ. ಮಳೆ ಕಡಿಮೆಯಾದ ಕೂಡಲೇ ಎರಡು ದಿನಗಳಲ್ಲಿ ಸಮರ್ಪಕವಾಗಿ ಬದಲಿ ರಸ್ತೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಹೆಬ್ರಿ ಮಡಾಮಕ್ಕಿ ಮೂಲಕ ಕೊಲ್ಲೂರು ಸಂರ್ಪಕಿಸುವ ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ಕಂಚರ್ಕಳ್‌ ಎಂಬಲ್ಲಿ ಸಂಪರ್ಕ ಕಡಿತಗೊಂಡು ಹೆಬ್ರಿಗೆ ಬರಲು ಸಂಕಷ್ಟವಾಗುತ್ತಿದ್ದು ಗ್ರಾಮಸ್ಥರು ಮಂಗಳವಾರ ಹೆಬ್ರಿಯಲ್ಲಿ ಪ್ರತಿಭಟನೆ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.