ADVERTISEMENT

ಉಡುಪಿ | ಬೀದಿ ವ್ಯಾಪಾರಿಗಳ ತೆರವಿನ ಹಿಂದೆ ರಾಜಕೀಯ ಇಲ್ಲ: ಪುರಸಭೆ ಅಧ್ಯಕ್ಷ

ಗೋಷ್ಠಿಯಲ್ಲಿ ಕಾಣದ ಅಧಿಕಾರಿ ವರ್ಗ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:23 IST
Last Updated 7 ನವೆಂಬರ್ 2025, 7:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕುಂದಾಪುರ: ‘ಪುರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ಜನಪ್ರತಿನಿಧಿ, ರಾಜಕೀಯ ಮುಖಂಡರ ಒತ್ತಡವಾಗಲಿ, ವೈಯಕ್ತಿಕ ಹಿತಾಸಕ್ತಿಯಾಗಲಿ ಇಲ್ಲ’ ಎಂದು ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೀದಿ ಬದಿ ವ್ಯಾಪಾರಿಗಳಿಂದ ಪಾರ್ಕಿಂಗ್ ಹಾಗೂ ಸ್ವಚ್ಛತೆಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣಕ್ಕೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸಹಮತ ಪಡೆದು, ನಿರ್ಣಯ ಮಾಡಿಯೇ ತೆರವು ನಿರ್ಧಾರಕ್ಕೆ ಬರಲಾಗಿತ್ತು ಎಂದು ಪುರಸಭೆಯ ನಿಲುವನ್ನು ಸಮರ್ಥಿಸಿಕೊಂಡರು.

ADVERTISEMENT

ಅನಧಿಕೃತ ಮತ್ತು ಪರವಾನಗಿ ಇಲ್ಲದ ಅಂಗಡಿಗಳನ್ನು ತೆರವು ಮಾಡಲಾಗಿದೆ. ಇದು ಆಡಳಿತಾತ್ಮಕ ನಿರ್ಧಾರ. ಗಾಂಧಿ ಮೈದಾನ ಎದುರು ಮತ್ತು ನೆಹರೂ ಮೈದಾನದಲ್ಲಿದ್ದ ಅಂಗಡಿಗಳ ತೆರವಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಆಗಲೂ ನಾವು ಆತುರ ತೋರದೆ, ಸಮಯಾವಕಾಶ ಕೇಳಿದ್ದೆವು. ಪುರಸಭೆ ತೆರವು ಮಾಡುವ ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೆಲವು ಅಂಗಡಿಗಳನ್ನು ತೆಗೆಸಿದ್ದರು. ಬಸ್ರೂರು ಮೂರುಕೈಯಿಂದ ಜೂನಿಯರ್ ಕಾಲೇಜು ಎದುರು ಹಾಗೂ ಶಾಸ್ತ್ರೀ ಸರ್ಕಲ್‌ ಫ್ಲೈಓವರ್ ಕೆಳಗೆ ಅನಧಿಕೃತವಾಗಿ ಪಾನಿಪೂರಿ ಅಂಗಡಿಗಳು ಆರಂಭವಾಗಿದ್ದವು. ಆಹಾರ ಗುಣಮಟ್ಟದ ಬಗ್ಗೆ ಪ್ರಮಾಣೀಕರಣ ಮಾಡಿಸದ ಅಂಗಡಿಗಳಿಂದ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸರಿಯಾದ ಜಾಗ ಗುರುತಿಸಿ, ಪರವಾನಗಿ ನೀಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಎಂದರು.