ಉಡುಪಿ: ಮಲ್ಪೆ ಬೀಚ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಲೈಫ್ ಗಾರ್ಡ್ ರಕ್ಷಿಸಿದ್ದಾರೆ.
ಸಮುದ್ರ ಪ್ರಕ್ಷುಬ್ಧಗೊಂಡಿರುವ ಕಾರಣ ಮಲ್ಪೆ ಬೀಚ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದರೂ ಭಾನುವಾರ ಮಹಿಳೆ ಏಕಾಏಕಿ ಸಮುದ್ರಕ್ಕಿಳಿದು ಆತ್ಮಹತ್ಯೆಗೆ ಮುಂದಾದರು. ಕೂಡಲೇ ಲೈಫ್ ಗಾರ್ಡ್ಸ್ ಸಮುದ್ರಕ್ಕಿಳಿದು ಮಹಿಳೆಯನ್ನು ರಕ್ಷಿಸಿ ಮಲ್ಪೆ ಠಾಣೆಗೆ ಒಪ್ಪಿಸಿದರು. ಮಹಿಳೆಯ ಜತೆ 15 ವರ್ಷದ ಮಗ ಕೂಡ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.