ADVERTISEMENT

ಬಾಕ್ಸಿಂಗ್: ನೀರಜ್ ಗೋಯಟ್‌ಗೆ ಗೆಲುವು

ಮಣಿಪಾಲದ ಮಾಹೆಯಲ್ಲಿ ನಡೆದ ಫೈಟ್‌ನೈಟ್‌ ಮೆಗಾ ಬಾಕ್ಸಿಂಗ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 14:32 IST
Last Updated 11 ಏಪ್ರಿಲ್ 2022, 14:32 IST
ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್ ಸಂಸ್ಥೆಯ ಎಂಐಟಿ ಕ್ವಾಡ್ರಂಗಲ್ ಅಂಗಳದಲ್ಲಿ ಭಾನುವಾರ ನಡೆದ ಫೈಟ್‌ನೈಟ್‌ ಮೆಗಾ ಬಾಕ್ಸಿಂಗ್ ಟೂರ್ನಿಯಲ್ಲಿ ಸುರೇಶ್ ಪಾಶಮ್ ವಿರುದ್ಧ ನೀರಜ್ ಗೋಯಟ್‌ ಗೆಲುವು ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡರು.
ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್ ಸಂಸ್ಥೆಯ ಎಂಐಟಿ ಕ್ವಾಡ್ರಂಗಲ್ ಅಂಗಳದಲ್ಲಿ ಭಾನುವಾರ ನಡೆದ ಫೈಟ್‌ನೈಟ್‌ ಮೆಗಾ ಬಾಕ್ಸಿಂಗ್ ಟೂರ್ನಿಯಲ್ಲಿ ಸುರೇಶ್ ಪಾಶಮ್ ವಿರುದ್ಧ ನೀರಜ್ ಗೋಯಟ್‌ ಗೆಲುವು ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡರು.   

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್ ಸಂಸ್ಥೆಯ ಎಂಐಟಿ ಕ್ವಾಡ್ರಂಗಲ್ ಅಂಗಳದಲ್ಲಿ ಭಾನುವಾರ ನಡೆದ ಫೈಟ್‌ನೈಟ್‌ ಮೆಗಾ ಬಾಕ್ಸಿಂಗ್ ಟೂರ್ನಿಯಲ್ಲಿ ಮೂರು ಬಾರಿ ಡಬ್ಲ್ಯುಬಿಸಿ ಪ್ರಶಸ್ತಿ ವಿಜೇತ ಬಾಕ್ಸರ್‌ ನೀರಜ್ ಗೋಯಟ್‌ ಅತ್ಯುತ್ತಮ ಪ್ರದರ್ಶನ ನೀಡಿದರು.

ಯುನಿವರ್ಸಿಟಿ ನ್ಯಾಷನಲ್‌ ಚಾಂಪಿಯನ್‌ ಸುರೇಶ್‌ ಪಾಶಮ್ ವಿರುದ್ಧ ನೀರಜ್ ಗೋಯಟ್ ಗೆಲವು ಸಾಧಿಸಿದರು. ಸೂಫರ್ ಫೆದರ್‌ ವೇಯ್ಟ್‌ ಸುತ್ತಿನಲ್ಲಿ ವಿಕಾಸ್ ಪಂಗಲ್ ವಿರುದ್ಧ ಸಾಗರ್ ಚಾಂದ್‌ ಜಯ ಪಡೆದರೆ, ಸೂಪರ್ ಮಿಡಲ್‌ ವೇಯ್ಟ್‌ ಸುತ್ತಿನಲ್ಲಿ ಜಸ್‌ಪ್ರೀತ್‌ ವಿರುದ್ಧ ಹರ್‌ಪಲ್‌ ಸಿಂಗ್‌ ಗೆದ್ದು ಬೀಗಿದರು. ಲೈಟ್‌ ಹೆವಿ ವೇಯ್ಟ್‌ ಸುತ್ತಿನಲ್ಲಿ ಮ್ಯಾಕ್ಸ್‌ ವಿರುದ್ಧ ಮನ್‌ದೀಪ್ ದಲಾಲ್‌ ಗೆಲುವು ಪಡೆದರು.

ಕಿಕ್ ಬಾಕ್ಸರ್ ರಿತಿಕಾ ಸಿಂಗ್‌, ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್‌, ಮಾಹೆ ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ.ವಿನೋದ್ ನಾಯಕ್‌, ಸಾರ್ವಜನಿಕ ಸಂಪರ್ಕ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್‌.ಪಿ.ಕಾರ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.