ADVERTISEMENT

ವೈದ್ಯಕೀಯ ತುರ್ತಿಗೆ ಉಚಿತ ಆಟೋ ಸೇವೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 14:55 IST
Last Updated 12 ಮೇ 2021, 14:55 IST
ಲಾಕ್‌ಡೌನ್ ಅವಧಿಯಲ್ಲಿ ವೈದ್ಯಕೀಯ ತುರ್ತುಗಳಿಗೆ ಉಚಿತ ಆಟೋ ಸೇವೆ ನೀಡಲು ಮುಂದಾಗಿರುವ ಉಡುಪಿಯ ಆಶ್ರಯದಾತ ಆಟೋ ಯೂನಿಯನ್ ಚಾಲಕರಿಗೆ ಬುಧವಾರ ಸಾರಿಗೆ ಪ್ರಾಧಿಕಾರದ ಅಧಿಕಾರಿ ಜೆ.ಪಿ.ಗಂಗಾಧರ್ ಗುರುತಿನ ಪತ್ರಗಳನ್ನು ವಿತರಿಸಿದರು.
ಲಾಕ್‌ಡೌನ್ ಅವಧಿಯಲ್ಲಿ ವೈದ್ಯಕೀಯ ತುರ್ತುಗಳಿಗೆ ಉಚಿತ ಆಟೋ ಸೇವೆ ನೀಡಲು ಮುಂದಾಗಿರುವ ಉಡುಪಿಯ ಆಶ್ರಯದಾತ ಆಟೋ ಯೂನಿಯನ್ ಚಾಲಕರಿಗೆ ಬುಧವಾರ ಸಾರಿಗೆ ಪ್ರಾಧಿಕಾರದ ಅಧಿಕಾರಿ ಜೆ.ಪಿ.ಗಂಗಾಧರ್ ಗುರುತಿನ ಪತ್ರಗಳನ್ನು ವಿತರಿಸಿದರು.   

ಉಡುಪಿ: ಲಾಕ್‌ಡೌನ್ ಸಂದರ್ಭ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ವೈದ್ಯಕೀಯ ತುರ್ತು ಅಗತ್ಯವಿದ್ದವರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ಉಡುಪಿಯ ಹಲವು ಆಟೋ ಸಂಘಟನೆಗಳು ಮುಂದಾಗಿದ್ದು, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಉಚಿತವಾಗಿ ಆಟೋ ಸೇವೆ ನೀಡುತ್ತಿವೆ.

ಉಡುಪಿಯ ಆಶ್ರಯದಾತ ಆಟೋ ಯೂನಿಯನ್ ಕೂಡ ಸಾರ್ವಜನಿಕರಿಗೆ ಉಚಿತ ಆಟೊ ಸೇವೆ ನೀಡಲು ಮುಂದಾಗಿದ್ದು, ಬುಧವಾರ ಯೂನಿಯನ್ ಆಟೋಗಳು ಲಾಕ್‌ಡೌನ್ ಅವಧಿಯಲ್ಲಿ ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಪ್ರಾಧಿಕಾರದಿಂದ ಗುರುತಿನ ಪತ್ರಗಳನ್ನು ನೀಡಲಾಯಿತು.

ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ್‌ ಅವರು ಆಶ್ರಯದಾತ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರಿಗೆ ಅನುಮತಿ ಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.

ADVERTISEMENT

ವೈದ್ಯಕೀಯ ತುರ್ತು ಇದ್ದರೆ ಸಾರ್ವಜನಿಕರು ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಿ ಉಚಿತ ಆಟೋ ಸೇವೆ ಪಡೆಯಬಹುದು. ಉಡುಪಿ ತಾಲ್ಲೂಕು: ಶಿವಾನಂದ ಮೂಡುಬೆಟ್ಟು 9343012627, ಸಾಧಿಕ್‌– 9880184746), ಉಮೇಶ್ ಶೆಟ್ಟಿ-9740763680.

ಕಾರ್ಕಳ ತಾಲ್ಲೂಕು: ಶಿವಪ್ರಸಾದ್ ಶೆಟ್ಟಿ-9844674296), ಪದ್ಮಕುಮಾರ್-9449964332, ಕುಂದಾಪುರ ತಾಲ್ಲೂಕು: ಎಂ. ರಾಜುಶೆಟ್ಟಿ -9448621541, ಕಾಪು ತಾಲ್ಲೂಕು: ಎಂ.ಹುಸೈನಾರ್-9945934767, ಬ್ರಹ್ಮಾವರ: ಕೆ.ರವೀಂದ್ರ ಬೈಕಾಡಿ–9880935194, ಹೇರೂರು: ಕೆ. ಶೇಖರ್ ಜತ್ತನ್ನ-8971466490.

‘ಉಚಿತ ಅರೋಗ್ಯ ಸೇವೆ-ಸ್ವಯಂ ಸೇವಕ ಚಾಲಕ’ ಎಂಬ ಘೋಷಣೆಯೊಂದಿಗೆ ಉಡುಪಿ ಜಿಲ್ಲೆಯ ಹಲವೆಡೆ ಆಟೋಗಳು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.