ADVERTISEMENT

ಕುಂದಾಪುರ: ಮಧ್ಯರಾತ್ರಿವರೆಗೆ ಬಂಡೆಯ ಕೆಳಗೆ ಕುಳಿತ ಬಾಲಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 4:40 IST
Last Updated 9 ಜನವರಿ 2026, 4:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎಐ ಚಿತ್ರ)

ಕುಂದಾಪುರ: ಮನೆಯ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕ ಸಂಜೆ ಬಳಿಕ ನಾಪತ್ತೆಯಾದ ಕಾರಣ ಕೆಲಕಾಲ ಸೃಷ್ಟಿಯಾಗಿದ್ದ ಆತಂಕವನ್ನು ಗಂಗೊಳ್ಳಿ ಪೊಲೀಸರು ಹಾಗೂ ಸಾರ್ವಜನಿಕರು ಸತತ ಕಾರ್ಯಾಚರಣೆಯ ಮೂಲಕ ದೂರ ಮಾಡಿದರು.

ADVERTISEMENT

ಗುಜ್ಜಾಡಿ ಬೆಣ್ಣೆರೆಯಲ್ಲಿನ 4ನೇ ತರಗತಿ ವಿದ್ಯಾರ್ಥಿ ಬುಧವಾರ ಶಾಲೆಬಿಟ್ಟು ಮನೆಗೆ ಬಂದು ಆಟವಾಡಿಕೊಂಡಿದ್ದ. ಕತ್ತಲೆ ಕವಿದರೂ ಮನೆಗೆ ಬಾರದೇ ಇದ್ದುದರಿಂದ ಹುಡುಕಾಟ ನಡೆದಿತ್ತು. ರಾತ್ರಿಯಾದರೂ ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆ ಪಕ್ಕದ ಎತ್ತರದ ಬಂಡೆಯ ಕೆಳಭಾಗದಲ್ಲಿ ಕುಳಿತುಕೊಂಡಿದ್ದ ಬಾಲಕ ರಾತ್ರಿ 12.40ರ ಸುಮಾರಿಗೆ ಪತ್ತೆಯಾಗಿದ್ದಾನೆ.

ಬಿದ್ದು ಗಾಯಗೊಂಡಿದ್ದ ಬಾಲಕ ಮನೆಗೆ ಹೋದರೆ ಬೈಯ್ಯುತ್ತಾರೆ ಎಂದು ಹೆದರಿ ಮನೆಗೆ ತೆರಳದೆ ಮನೆಯ ಮೇಲಿನ ಬಂಡೆಕಲ್ಲಿನ ಕೆಳಗೆ ಅಡಗಿ ಕುಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಎಸ್‌ಐ ಪವನ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.