ADVERTISEMENT

ಮುದ್ರಾಡಿ: ಶಾಲಾ ಸಂಸತ್ತು ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:16 IST
Last Updated 15 ಜೂನ್ 2022, 6:16 IST

ಹೆಬ್ರಿ: ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನ ಅತ್ಯಂತ ಅವಶ್ಯವಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತದಾನ ಮಾಡುವ ಪದ್ಧತಿಯನ್ನು ಅರಿತು ಭವಿಷ್ಯದ ನಾಯಕರನ್ನು ಆಯ್ಕೆ ಮಾಡುವ ಮೂಲಕ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ‌ಶಿಕ್ಷಕಿ ಇಂದಿರಾ ಬಾಯರಿ ಹೇಳಿದರು.

ಅವರು ಮುದ್ರಾಡಿ ಎಂ.ಎನ್‌.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ 2022-23ನೇ ಸಾಲಿನ ಶಾಲಾ ಸಂಸತ್ತು ಚುನಾವಣೆಗೆ ಚಾಲನೆ ನೀಡಿ ಮಾತನಾಡಿದರು. ಮತಗಟ್ಟೆ ಅಧಿಕಾರಿಯಾಗಿ ಸಾಕ್ಷರತಾ ಕ್ಲಬ್ ನೋಡಲ್ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಒಂದನೇ ಪೋಲಿಂಗ್ ಅಧಿಕಾರಿಯಾಗಿ ಮಹೇಶ್ ನಾಯ್ಕ್, ಎರಡನೇ ಪೋಲಿಂಗ್ ಅಧಿಕಾರಿಯಾಗಿ ಶ್ಯಾಮಲಾ ಕೊಠಾರಿ, ಮೂರನೇ ಪೋಲಿಂಗ್ ಅಧಿಕಾರಿಯಾಗಿ ರಘುಪತಿ ಹೆಬ್ಬಾರ್ ಮತದಾನ ನಡೆಸಿಕೊಟ್ಟರು.

ಶಾಲಾ ವಿದ್ಯಾರ್ಥಿ ನಾಯಕನಾಗಿ ಶೋಧನ್ ಶೆಟ್ಟಿಗಾರ್, ಉಪನಾಯಕನಾಗಿ ವಾಸ್ತಿಕ್ ಆಯ್ಕೆಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.