ಕಾರ್ಕಳ: ತೋಟದ ಷೆಡ್‌ನಲ್ಲಿ ದಾಸ್ತಾನು ಇರಿಸಿದ್ದ ಒಣ ಅಡಿಕೆ ಇದ್ದ ಸುಮಾರು 34 ಚೀಲಗಳನ್ನು ಹಾಗೂ ಸಿಸಿಟಿವಿ ಕ್ಯಾಮೆರಾವನ್ನು ಷೆಡ್‌ನ ಬೀಗ ಒಡೆದು ಕದ್ದೊಯ್ದ ಘಟನೆ ತಾಲ್ಲೂಕಿನ ಮುಲ್ಲಡ್ಕದಲ್ಲಿ ನಡೆದಿದೆ.
ಮುಲ್ಲಡ್ಕದ ರವೀಂದ್ರ ಅವರು ತೋಟದಲ್ಲಿ ಅಡಿಕೆ ದಾಸ್ತಾನು ಇಟ್ಟಿದ್ದರು. ಕಳವಾದ ಅಡಿಕೆಯ ಮೌಲ್ಯ ಸುಮಾರು ₹ 5ಲಕ್ಷವಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.