ಬ್ರಹ್ಮಾವರ: ಕಾಡೂರು ಗ್ರಾಮದ ಮುಂಡಾಡಿಯ ಬ್ರಹ್ಮಲಿಂಗೇಶ್ವರ ಹೊಸಕಟ್ಟೆ ಕೇತ್ರಕ್ಕೆ ಮೈಸೂರು ಕೆ.ಆರ್.ನಗರ ಯಡತೊಡೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು.
ಪೂಜೆಯಲ್ಲಿ ಪಾಲ್ಗೊಂಡ ಅವರು ಪ್ರತಿಷ್ಟಾಪಿಸಲ್ಪಟ್ಟ ಮಹರ್ಷಿ ಪಾದದ ಸಮ್ಮುಖದಲ್ಲಿ ನೆರೆದ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು. ಹಮ್ಮಿಕೊಳ್ಳಲಾಗಿರುವ ಹೆಬ್ಬಾಗಿಲಿನೊಂದಿಗೆ ಸಭಾಂಗಣದ ವಿಸ್ತರಣಾ ಕಾರ್ಯದ ವಿವರಣೆ ಪಡೆದು ಜನೋಪಯೋಗಿ ಕಾರ್ಯಕ್ಕೆ ಶುಭ ಹಾರೈಸಿದರು.
ಪ್ರೊ.ಸಖಾರಾಮ ಸೋಮಯಾಜಿ, ಪ್ರಮೋದ್ ಕುಮಾರ್ ಶೆಟ್ಟಿ, ನಾಗರಾಜ ಮಕ್ಕಿತ್ತಾಯ, ಹರೀಶ ಶಾನುಭಾಗ್, ಸುಧೀರ ಕುಮಾರ್ ಶೆಟ್ಟಿ, ದೇವಸ್ಥಾನದ ಆಡಳಿತ ಮುಖ್ಯಸ್ಥ ವಿಶ್ವನಾಥ ಶೆಟ್ಟಿ, ರಾಮದಾಸ ಶೆಟ್ಟಿ, ಭುಜಂಗ ಶೆಟ್ಟಿ, ಸಂತೋಷ್ ಪೂಜಾರಿ, ಪ್ರಧಾನ ಅರ್ಚಕ ಸವಿನ್ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.