
ಪ್ರಜಾವಾಣಿ ವಾರ್ತೆ
ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೋಮವಾರ ಕ್ಷೀರಾಬ್ದಿ ತುಳಸಿ ಪೂಜೆ ನಡೆಯಿತು.
ಬೆಳಿಗ್ಗೆ ಪ್ರಬೋಧೋತ್ಸವ ನಡೆದಿದ್ದು, ಸಂಜೆ ಮಧ್ವಸರೋವರ ಬಳಿ ತುಳಸಿ ವಿವಾಹ ನಡೆಸುವ ಮೂಲಕ ಕ್ಷೀರಾಬ್ದಿಪೂಜೆ, ಸಂಸ್ಥಾನ ದೇವರ ಪೂಜೆ ನಡೆಸಲಾಯಿತು.
ಸಂಜೆ ರಥೋತ್ಸವ ಸಹಿತ ವಿಶೇಷ ಉತ್ಸವಾದಿಗಳಿ ಹಾಗೂ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೃಷ್ಣ- ಮುಖ್ಯಪ್ರಾಣರ ರಥಾರೋಹಣ ನಡೆದು ರಥೋತ್ಸವ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.