ADVERTISEMENT

ಹೆಜಮಾಡಿ: ಕಡಲ್ಕೊರೆತ, ಉಪ್ಪು ನೀರು ನುಗ್ಗಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 14:12 IST
Last Updated 25 ಅಕ್ಟೋಬರ್ 2019, 14:12 IST
ಹೆಜಮಾಡಿಯಲ್ಲಿ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ ಕಾರಣ ಬೆಳೆ ಹಾನಿಯಾಗಿದೆ. ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್‌ಐ ರವಿಶಂಕರ್ ಜತೆಗೆ ಆಗಮಿಸಿ ಪರಿಶೀಲನೆ ನಡೆಸಿದರು. 
ಹೆಜಮಾಡಿಯಲ್ಲಿ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ ಕಾರಣ ಬೆಳೆ ಹಾನಿಯಾಗಿದೆ. ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್‌ಐ ರವಿಶಂಕರ್ ಜತೆಗೆ ಆಗಮಿಸಿ ಪರಿಶೀಲನೆ ನಡೆಸಿದರು.    

ಪಡುಬಿದ್ರಿ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೆಜಮಾಡಿಯಲ್ಲಿ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗಿದ ಕಾರಣ ಬೆಳೆ ಹಾನಿಯಾಗಿದೆ. ಕಾಪುವಿನಲ್ಲಿ ಕಡಲ್ಕೊರೆತ ತೀವ್ರವಾಗಿದೆ.

ಅರಬ್ಬಿ ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಶಾಂಭವಿ ಹೊಳೆ ದಡ ಮೀರಿದೆ. ಕಡಲಿನ ಉಪ್ಪು ನೀರು ಹೆಜಮಾಡಿ ಗ್ರಾಮದ ನಡಿಕುದ್ರು, ಪರಪಟ್ಟ, ಕೊಪ್ಪಲಗಳಲ್ಲಿ ಗದ್ದೆಗಳಿಗೆ ನುಗ್ಗಿ ಭತ್ತದ ಬೆಳೆ ಹಾನಿಯಾಗಿದೆ.

ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ ಅವರು ಈ ಬಗ್ಗೆ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಗಮನ ಸೆಳೆದಿದ್ದು, ಆರ್‌ಐ ರವಿಶಂಕರ್ ಜತೆಗೆ ಆಗಮಿಸಿ ಪರಿಶೀಲನೆ ನಡೆಸಿದರು.

ADVERTISEMENT

ಕೆಲವು ಕಡೆ ಭತ್ತದ ಕಟಾವು ನಡೆದಿದ್ದು, ತರಕಾರಿ ಬೆಳೆ ಬೆಳೆಯಲು ನಿರ್ಧರಿಸಲಾಗಿತ್ತು. ಇದೀಗ ಉಪ್ಪು ನೀರು ನುಗ್ಗಿದ ಪರಿನಾಮ ತರಕಾರಿ ಬೆಳೆ ಅಸಾಧ್ಯವಾಗಿದೆ ಎಂದು ಕೃಷಿಕ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಾಮನ ಕೋಟ್ಯಾನ್ ನಡಿಕುದ್ರು ತಿಳಿಸಿದ್ದಾರೆ.

ಕಡಲು ಪ್ರಕ್ಷುಬ್ದ: ಕಳೆ ಎರಡು ದಿನಗಳಿಂದಲೂ ಸುರಿದ ತೀವ್ರ ಮಳೆಯಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಹಲವಡೆ ಕಡಲ್ಕೊರೆತ ಭೀತಿ ಉಂಟಾಗಿದೆ. ಕಾಪು ಲೈಟ್ ಹೌಸ್ ಬಳಿ ಸಮುದ್ ಅಲೆಗಳು ಬಿರುಸುಗೊಂಡಿವೆ, ಸಮುದ್ರ ಕೊರೆತ ಹೆಚ್ಚಿದೆ. ಪಡುಬಿದ್ರಿಯ ಕಾಮಗಾರಿ ನಡೆಯುತ್ತಿರುವ ಬ್ಲೂ ಫ್ಲ್ಯಾಗ್ ಬೀಚ್ ಪರಿಸರದಲ್ಲೂ ಕಡಲ್ಕೊರೆತ ತೀವ್ರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.