
ಕಾರ್ಕಳ: ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ‘ಸಂವಹನ ಮತ್ತು ತಂತ್ರಜ್ಞಾನದ ಇತ್ತೀಚಿನ ಪ್ರವೃತ್ತಿಗಳು- 5ಜಿಯಿಂದ 6ಜಿ ಕಡೆಗೆ ಹಾದಿ’ ಎಂಬ ಕಾರ್ಯಾಗಾರ ನಡೆಯಿತು.
ಬೆಂಗಳೂರಿನ ಐಇಇಇ ಎಪಿ/ಎಂಟಿಟಿ-ಎಸ್ ಜಂಟಿ ಘಟಕದ ಅಧ್ಯಕ್ಷ ಅಶುತೋಷ್ ಕೇದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈರ್‌ಲೆಸ್ ಸಂವಹನ ತಂತ್ರಜ್ಞಾನಗಳಲ್ಲಿ ತ್ವರಿತ ಪ್ರಗತಿ ನಡೆದಿದೆ. ರಾಡಾರ್ ಮತ್ತು ರಕ್ಷಣಾ ಎಲೆಕ್ಟ್ರಾನಿಕ್ಸ್ ಸಂಶೋಧನೆಯಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಜಾಗತಿಕ ತಾಂತ್ರಿಕ ಬೆಳವಣಿಗೆಗಳೊಂದಿಗೆ ವೇಗ ಕಾಯ್ದುಕೊಳ್ಳಲು ಸಂಶೋಧನೆ, ನಾವೀನ್ಯತೆ ಮತ್ತು ವೃತ್ತಿಪರ ಸಂಸ್ಥೆಗಳಾದ ಐಇಇಇಯಲ್ಲಿ ಅವಕಾಶಗಳಿವೆ ಎಂದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಎನ್.ಚಿಪ್ಲುಂಕರ್ ಮಾತನಾಡಿ, ಸುಧಾರಿತ ಸಂವಹನ ತಂತ್ರಜ್ಞಾನಗಳ ಮಹತ್ವ ಮತ್ತು ಶೈಕ್ಷಣಿಕ ಸಂಸ್ಥೆಗಳು 5ಜಿ ವಿಕಾಸ ಮತ್ತು 6ಜಿ ಕಡೆಗೆ ಮಾರ್ಗಸೂಚಿಯಂತಹ ಉದಯೋನ್ಮುಖ ಪ್ರವೃತ್ತಿಗಳೊಂದಿಗೆ ಬೋಧನೆ ಮತ್ತು ಸಂಶೋಧನೆಯನ್ನು ಹೊಂದಿಸುವ ಅಗತ್ಯವಿದೆ. ಭವಿಷ್ಯದ ತಾಂತ್ರಿಕ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಉದ್ಯಮ-ಶೈಕ್ಷಣಿಕ ಸಹಯೋಗದ ಪಾತ್ರ ಮಹತ್ವದ್ದು ಎಂದರು.
ಆರ್.ವಿ.ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕ ಮಹೇಶ್ ಎ, ಕಾಲೇಜಿನ ಐಇಇಇ ಕೌನ್ಸಿಲರ್ ಡಾ.ವಾಸುದೇವ, ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ದುರ್ಗಾಪ್ರಸಾದ್ ಉಪಸ್ಥಿತರಿದ್ದರು.
ಅಧ್ಯಾಪಕ ಸಲಹೆಗಾರ ಪರ್ವೀಜ್ ಶರೀಫ್ ಬಿ.ಜಿ ಕಾರ್ಯಾಗಾರದ ಕುರಿತು ವಿವರಿಸಿದರು.ವಿದ್ಯಾರ್ಥಿ ನಾಯಕ ಅದ್ವೈತ್ ಸ್ವಾಗತಿಸಿದರು. ವಿದ್ಯಾರ್ಥಿ ಉಪನಾಯಕ ಫರಾನ್ ವಂದಿಸಿದರು. ವಿದ್ಯಾರ್ಥಿನಿ ಧನುಶ್ರೀ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.