ADVERTISEMENT

ಸಾಲ ಮರುಪಾವರಿಗೆ ಒತ್ತಡ ಬೇಡ: ಸಚಿವ ಕೋಟ ತಾಕೀತು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:06 IST
Last Updated 18 ಸೆಪ್ಟೆಂಬರ್ 2019, 14:06 IST

ಉಡುಪಿ: ಮಹಿಳಾ ಮೀನುಗಾರರು 2017 ರಿಂದ 2019ವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ₹ 50 ಸಾವಿರದವರೆಗಿನ ಒಟ್ಟು ₹ 60 ಕೋಟಿ ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡುವಂತೆ ಮೀನುಗಾರ ಮಹಿಳೆಯರಿಗೆ ಯಾವುದೇ ರೀತಿ ಒತ್ತಡ ಹೇರಬಾರದು ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬ್ಯಾಂಕ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡುವಂತೆ ಮೀನುಗಾರ ಮಹಿಳೆಯರಿಗೆ ಒತ್ತಡ ಹೇರುತ್ತಿರುವ ಬಗ್ಗೆ ಮೀನು ಮಾರಾಟಗಾರರ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ರುದ್ರೇಶ್‌ ಅವರೊಂದಿಗೆ ಸಭೆ ನಡೆಸಿದರು.

ಈಗಾಗಲೇ ಸರ್ಕಾರ ಈ ಯೋಜನೆಗಾಗಿ ₹ 60 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಬ್ಯಾಂಕ್‌ಗಳಿಂದ ಮಹಿಳಾ ಮೀನುಗಾರರ ಸಾಲದ ಕುರಿತ ಮಾಹಿತಿ ಕಲೆ ಹಾಕುತ್ತಿದೆ. ಆದ್ದರಿಂದ ಬ್ಯಾಂಕ್‌ಗಳು ಸಾಲ ಮರು ಪಾವತಿ ಕುರಿತಂತೆ ಮೀನುಗಾರರಿಗೆ ಯಾವುದೇ ಕಾರಣಕ್ಕೂ ಒತ್ತಡ ತರಬಾರದು ಎಂದು ಆದೇಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.