ADVERTISEMENT

ಉಡುಪಿ: ‘ಕೃಷ್ಣಮಠದಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 15:25 IST
Last Updated 24 ಜೂನ್ 2020, 15:25 IST
ಉಡುಪಿ ಕೃಷ್ಣಮಠ
ಉಡುಪಿ ಕೃಷ್ಣಮಠ   

ಉಡುಪಿ: ಕೃಷ್ಣಮಠದಲ್ಲಿ ಈ ಬಾರಿ ಸಾರ್ವಜನಿಕರಿಗೆ ತಪ್ತಮುದ್ರಾಧಾರಣೆ ನಡೆಯುವುದಿಲ್ಲ. ಯತಿಗಳಿಗೆ ಮಾತ್ರ ತಪ್ತ ಮುದ್ರಾಧಾರಣೆ ಇರಲಿದೆ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಚಾತುರ್ಮಾಸ ವ್ರತಾಚರಣೆ ಆರಂಭದ ಆಷಾಡ ಶುದ್ಧ ಏಕಾದಶಿ ದಿನವಾದ ಜುಲೈ 1ರಂದು ತಪ್ತಮುದ್ರಾಧಾರಣೆ ನಡೆಯಲಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಂದು ಮುದ್ರಾಧಾರಣೆ ಇರುವುದಿಲ್ಲ. ಮುಂದೆ, ಸೂಕ್ತ ದಿನದಂದು ಅವಕಾಶ ಕಲ್ಪಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ

ಜೂನ್‌ 30ರಂದು ದೇವರಿಗೆ ಸಿಯಾಳ ಮಹಾಭಿಷೇಕ ನಡೆಯಲಿದ್ದು, ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಆದರೆ, ಸಿಯಾಳಗಳನ್ನು ರಾಜಾಂಗಣದ ಪ್ರವೇಶ ದ್ವಾರದ ಬಳಿ ಕೊಡಬಹುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.