ADVERTISEMENT

ನಿಷ್ಕಾಮ ಕರ್ಮದಿಂದ ಭಗವದನುಗ್ರಹ: ಶ್ರೀಪಾದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:39 IST
Last Updated 8 ಏಪ್ರಿಲ್ 2025, 13:39 IST
ಪಲಿಮಾರು ಮೂಲಮಠದಲ್ಲಿ ರಾಮನವಮಿಯಂದು ಸಪ್ತತಿಸಂಭ್ರಮದ ಧರ್ಮಾಮಾಚರಣೆಗಳು ನಡೆದವು
ಪಲಿಮಾರು ಮೂಲಮಠದಲ್ಲಿ ರಾಮನವಮಿಯಂದು ಸಪ್ತತಿಸಂಭ್ರಮದ ಧರ್ಮಾಮಾಚರಣೆಗಳು ನಡೆದವು   

ಪಡುಬಿದ್ರಿ: ಪಲಿಮಾರು ಮೂಲಮಠದಲ್ಲಿ ರಾಮ ನವಮಿಯ ಪರ್ವಕಾಲದಲ್ಲಿ ಶನಿವಾರ ಪುನರ್ವಸು ನಕ್ಷತ್ರ ದಿನ ಪ್ರತಿ ತಿಂಗಳಿನಂತೆ ಸಪ್ತತಿ ಸಂಭ್ರಮದ ಧರ್ಮ ಕರ್ಮಾಚರಣೆಗಳು ಸಂಹಿತಾ ಸಹಿತ ಸರ್ವಮೂಲ ಪಾರಾಯಣ ಜಪಾದಿಗಳು ಸಂಪನ್ನಗೊಂಡವು.

ತ್ರಿಕಾಲ ರಾಮಭದ್ರ ಕಮಂಡಲ ಪೂಜೆ, ರಾಮತಾರಕ ಮಂತ್ರ ಹೋಮ, ಧನ್ವಂತರಿ ತ್ರಿವಿಕ್ರಮ ಗಾಯತ್ರಿ ಹೋಮ, ಗುರು ಶಾಂತಿ ವಿಧ್ಯುಕ್ತವಾಗಿ ನಡೆದವು. ಭಾನುವಾರ ರಾಮನವಮಿ ದಿನ ಪಟ್ಟದದೇವರಾದ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ಸಹಿತ ಡೋಲೋತ್ಸವ, ಅಷ್ಟಾವಧಾನ ಸೇವೆ ನಡೆದವು.

ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿ, ಭಗವಂತನಿಗೆ ಕೊಟ್ಟ ಎಲ್ಲವನ್ನೂ ಆತ ಭಕ್ತರಿಗೆ ಅನುಗ್ರಹಿಸುವನು. ನಿಷ್ಕಾಮಕರ್ಮ ಭಗವಂತನ ಅನುಗ್ರಹಕ್ಕೆ ಕಾರಣ ಎಂದು ಶ್ರೀರಾಮನ ಸಂದೇಶ ಸಾರಿದರು.

ADVERTISEMENT

ಯೋಗದೀಪಿಕಾ ಗುರುಕುಲದ ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.