ಶಿರ್ವ: ಉಡುಪಿ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಸದಾಶಿವ ಪ್ರಭು ಅವರು ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದು ಬೆಂಗಳೂರು ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾಗಿ ನೇಮಕಗೊಂಡು, ಪ್ರಥಮ ಬಾರಿಗೆ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಹಾಗೂ ರಾಜಾಪುರ ಸಾರಸ್ವತ ಯುವವೃಂದದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ದೇವಳದ ವೈದಿಕರಾದ ಸಂದೇಶ್ ಭಟ್ ಗಂಧಪ್ರಸಾದ ನೀಡಿ ಹರಿಸಿದರು. ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಅಧ್ಯಕ್ಷ ಜಯರಾಮ ಪ್ರಭು, ಆರ್‌ಎಸ್‍ಬಿ ಯುವವೃಂದದ ವತಿಯಿಂದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ, ವಾಸುದೇವ ನಾಯಕ್, ಶ್ರೀಶ ನಾಯಕ್, ಸುವರ್ಧನ್ ನಾಯಕ್, ದೇವಳದ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ್ ಪ್ರಭು, ಉಪೇಂದ್ರ ನಾಯಕ್, ಸುರೇಂದ್ರ ನಾಯಕ್, ಸಂತೋಷ್ ನಾಯಕ್, ಗಣಪತಿ ನಾಯಕ್, ಕಚೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ ಪಾಟ್ಕರ್, ವೀರೇಂದ್ರ ಪಾಟ್ಕರ್, ವೈದಿಕರಾದ ಸುಧೀಂದ್ರ ಭಟ್, ನರೇಶ್ ಭಟ್, ರವಿಚಂದ್ರ ಭಟ್, ರವೀಶ್ ಭಟ್, ಶ್ರೀಶಾಂತ್ ಭಟ್, ಶ್ರೀಕಾಂತ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.