ADVERTISEMENT

ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ವೇಷ ಧರಿಸಿ ಹಣ ಸಂಗ್ರಹ

ಮರಾಠಿ ಯುವ ಸಂಘಟನೆ ಕಾರ್ಯದಲ್ಲಿ ಹಲವು ಸಂಘಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 5:18 IST
Last Updated 3 ಸೆಪ್ಟೆಂಬರ್ 2022, 5:18 IST
ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಉಡುಪಿ ಜಿಲ್ಲಾ ಮರಾಠಿ ಯುವ ಸಂಘಟನೆ, ಹೆಬ್ರಿ ಮರಾಠಿ ಸಮಾಜ ಸೇವಾ ಸಂಘ ಮತ್ತು ಪೆರ್ಡೂರು ಮರಾಠಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ತಲಾಸೆಮಮೀಯ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಮಗು ಕುಚ್ಚೂರು ಸಾನ್ವಿ ನಾಯ್ಕ್ ಚಿಕಿತ್ಸೆಗೆ ವೇಷ ಧರಿಸಿ ಹಣ ಸಂಗ್ರಹಿಸುವ ಕಾರ್ಯ ನಡೆಯಿತು

ಹೆಬ್ರಿ: ಇಲ್ಲಿನ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ಬುಧ ವಾರ ಉಡುಪಿ ಜಿಲ್ಲಾ ಮರಾಠಿ ಯುವ ಸಂಘಟನೆ, ಹೆಬ್ರಿ ಮರಾಠಿ ಸಮಾಜ ಸೇವಾ ಸಂಘ ಮತ್ತು ಪೆರ್ಡೂರು ಮರಾಠಿ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಥಲಸ್ಸೇಮಿಯಾದಿಂದ ಬಳಲುತ್ತಿರುವ ಪುಟ್ಟ ಮಗು ಕುಚ್ಚೂರು ಸಾನ್ವಿ ನಾಯ್ಕ್ ಚಿಕಿತ್ಸೆಗೆ ವೇಷ ಧರಿಸಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಯುವಕರು ಮತ್ತು ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾದರು.

ಹೆಬ್ರಿ ಮರಾಠಿ ಸಮಾಜ ಸೇವ ಸಂಘದ ಗೌರವಾಧ್ಯಕ್ಷ ಎಚ್ ಸಂಜೀವ ನಾಯ್ಕ್, ಅಧ್ಯಕ್ಷ ನಾಗೇಂದ್ರ ನಾಯ್ಕ್, ಜಿಲ್ಲಾ ಯುವ ಸಂಘಟನೆಯ ಅಧ್ಯಕ್ಷ ಕೃಷ್ಣನಾಯ್ಕ್,ಹೆಬ್ರಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಸುಮಿತ್ರ ನಾಯ್ಕ್, ಹೆಬ್ರಿ ಸಂಘದ ಕಾರ್ಯದರ್ಶಿ ಯೋಗೀಶ ನಾಯ್ಕ್, ಸಂಘದ ಹಿರಿಯರಾದ ಆನಂದ ನಾಯ್ಕ್, ಹೆಬ್ರಿ ಪಂಚಾಯಿತಿ ಸದಸ್ಯ ಕೃಷ್ಣ ನಾಯ್ಕ್, ಸಂಘದ ಸದಸ್ಯ ಶಾಮು ನಾಯ್ಕ್, ಜಿಲ್ಲಾ ಯುವ ಸಂಘಟನೆ ಉಪಾಧ್ಯಕ್ಷ ಉಪೇಂದ್ರ ನಾಯ್ಕ್, ರಾಘವೇಂದ್ರ ನಾಯ್ಕ್, ಅವಿನಾಶ ನಾಯ್ಕ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.