ADVERTISEMENT

ಕಾರ್ಕಳ: ಅಗತ್ಯವಸ್ತು ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 6:02 IST
Last Updated 8 ಜೂನ್ 2021, 6:02 IST
ಕಾರ್ಕಳದ ಪೇಟೆಯಲ್ಲಿ ಅಗತ್ಯವಸ್ತು ಖರೀದಿಗೆ ಜನದಟ್ಟಣಿ ಕಂಡುಬಂತು.
ಕಾರ್ಕಳದ ಪೇಟೆಯಲ್ಲಿ ಅಗತ್ಯವಸ್ತು ಖರೀದಿಗೆ ಜನದಟ್ಟಣಿ ಕಂಡುಬಂತು.   

ಕಾರ್ಕಳ: ಇಲ್ಲಿನ ಪೇಟೆಯಲ್ಲಿ ಅಗತ್ಯ ವಸ್ತು ಖರೀದಿಗಾಗಿ ಸೋಮವಾರ ಬೇರೆ ಬೇರೆ ಕಡೆಗಳಿಂದ ಬಂದ ವಾಹನ ಹಾಗೂ ಜನಸಂದಣಿಯಿಂದ ಸಂಚಾರ ದಟ್ಟಣೆ ಉಂಟಾಯಿತು.

ಈಗಾಗಲೇ ತಾಲ್ಲೂಕಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಪ್ರದೇಶದ ಜನರಿಗೆ ಸೋಮವಾರ ಮತ್ತು ಮಂಗಳವಾರ ಮಾತ್ರ ಬೆಳಿಗ್ಗೆ 6ರಿಂದ 10ರ ತನಕ ಅಗತ್ಯವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಜನರು ಪೇಟೆಗೆ ಬಂದ ಕಾರಣ ಪೇಟೆ ಜನಸಂದಣಿಯಿಂದ ತುಂಬಿತ್ತು. ಎಲ್ಲೆಂದರಲ್ಲಿ ಜನರು, ವಾಹನಗಳು ತುಂಬಿ, ರಸ್ತೆ ದಾಟಿ ಇನ್ನೊಂದು ಕಡೆ ಖರೀದಿಗೆ ಹೋಗಲೂ ಕಾಯಬೇಕಾದ ಪರಿಸ್ಥಿತಿ ಕಂಡುಬಂತು.

ಔಷಧ ಅಂಗಡಿ, ಬ್ಯಾಂಕ್, ದಿನಸಿ ಅಂಗಡಿಗಳ ಎದುರು ಜನ ಉದ್ದದ ಸರದಿ ಸಾಲಿನಲ್ಲಿ ನಿಂತಿದ್ದರು. ಮುಖ್ಯ ಮಾರ್ಗದಲ್ಲಿ ಸಂಚಾರ ದಟ್ಟಣೆಯಿಂದ ಜನರಿಗೆ ಕೊಂಚ ತೊಂದರೆ ಉಂಟಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.