ಬ್ರಹ್ಮಾವರ: ರಕ್ತಚಂದನ ಗಿಡ ನೆಡುವಾಗ ಆದಾಯದ ಲೆಕ್ಕ ಹಾಕುವುದಕ್ಕಿಂತ ಪರಿಸರಕ್ಕೆ ಎಷ್ಟು ಯೋಗ್ಯ ಎಂಬುದನ್ನು ಆಲೋಚಿಸಬೇಕು ಎಂದು ಬ್ರಹ್ಮಾವರ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹೇಳಿದರು.
ಎಳ್ಳಂಪಳ್ಳಿ ದುರ್ಗಾ ಪರಮೇಶ್ವರಿ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ರಕ್ತಚಂದನ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನೆನಪಿನಲ್ಲಿ ಗಿಡ ನೆಡುವ ಮತ್ತು ಪೋಷಿಸುವ ಸಂಕಲ್ಪ ಗ್ರಾಮೀಣ ಭಾಗದಿಂದಲೇ ಆರಂಭವಾಗಬೇಕು. ಗಿಡಗಳನ್ನು ನೆಟ್ಟು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅವರು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸತೀಶ್ ಶೆಟ್ಟಿ ಕಾಡೂರು, ಕಾರ್ಯದರ್ಶಿ ನಿವೃತ್ತ ಶಿಕ್ಷಕ ಪುಟ್ಟಯ್ಯ ಶೆಟ್ಟಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ.ಧನಂಜಯ, ಉಪ ವಲಯ ಅರಣ್ಯಾಧಿಕಾರಿ ಹರೀಶ್ ಇದ್ದರು. ಬೈಂದೂರು, ಕಾರ್ಕಳ, ಪೆರ್ಡೂರು, ಕಾಪು, ಕುಂದಾಪುರ, ಶೃಂಗೇರಿ, ಕೊಪ್ಪ ಭಾಗದಿಂದ ಬಂದಿದ್ದ 150ಕ್ಕೂ ಹೆಚ್ಚು ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.