ADVERTISEMENT

ಪಾಲಿಟೆಕ್ನಿಕ್ ಕೋರ್ಸ್ ಪ್ರವೇಶ ದಿನಾಂಕ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:29 IST
Last Updated 15 ಜೂನ್ 2022, 6:29 IST

ಕಾರ್ಕಳ: ತಾಲ್ಲೂಕಿನ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ದಾಖಲಾತಿಯ ಅವಧಿಯನ್ನು 20ರ ತನಕ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಅಪ್ಯಾರಲ್ ಡಿಸೈನ್ ಹಾಗೂ ಫ್ಯಾಶನ್ ಟೆಕ್ನಾಲಜಿ ಕೋರ್ಸ್‌ಗಳಲ್ಲಿ ಕೆಲವು ಸೀಟುಗಳು ಉಳಿದಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟು ಹಂಚಲಾಗುತ್ತದೆ.

ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರ ಕಚೇರಿ, ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಪಾಲಿಟೆಕ್ನಿಕ್, ನಿಟ್ಟೆ- 574110, ಕಾರ್ಕಳ ತಾಲ್ಲೂಕು. ದೂರವಾಣಿ: 08258-281263- ವಿಸ್ತೃತ - 210, 212 ಅಥವಾ ಮೊಬೈಲ್‌: 9900919604 ಅನ್ನು ಸಂಪರ್ಕಿಸಬಹುದು.

ADVERTISEMENT

ಸಾಲಿಗ್ರಾಮ ವೇದ ಪಾಠಶಾಲೆ ಆರಂಭ

ಬ್ರಹ್ಮಾವರ: ಸಾಲಿಗ್ರಾಮ ಗುರುನರಸಿಂಹ ದೇವಳದ ನಿಗಮಾಗಮ ವೇದಪಾಠಶಾಲೆಯಲ್ಲಿ ಋಗ್ವೇದಾಧ್ಯಯನದ ತರಗತಿಗಳಿಗೆ ಉಪನೀತರಾದ ಅರ್ಹ ವಿಪ್ರ ವಟುಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ನಡೆಸುವ ಋಗ್ವೇದದಲ್ಲಿ ಪ್ರಥಮ, ಪ್ರವೇಶ ಮತ್ತು ಮೂಲ ಪರೀಕ್ಷೆಗಳ ತರಬೇತಿಯೊಂದಿಗೆ ಆಶ್ವಲಾಯನ ಪೂರ್ವಾಪರ ಪ್ರಯೋಗ ತರಬೇತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯೊಂದಿಗೆ ಶಿಷ್ಯ ವೇತನವನ್ನು ನೀಡಲಾಗುವುದು.

ವೇದಾಧ್ಯಯನಕ್ಕೆ ಸೇರಲಿಚ್ಛಿಸುವ ವಿಪ್ರ ವಿದ್ಯಾರ್ಥಿಗಳು ಜೂನ್ 15 ರಿಂದ ದೇವಳದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ. 9449545714ನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.