ADVERTISEMENT

ಮೀನುಗಾರರಿಂದ ಸಮುದ್ರ ಪೂಜೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 3:02 IST
Last Updated 25 ಜೂನ್ 2021, 3:02 IST
ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಸಮೀಪದ ಕೊರವಡಿ ಕೊಮೆ ಸಮುದ್ರ ಕಿನಾರೆಯಲ್ಲಿ ಗುರುವಾರ ಮೀನುಗಾರರು ಸಮುದ್ರ ಪೂಜೆ ಮಾಡಿ ಬಾಗಿನ ಸಮರ್ಪಿಸಿದರು
ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಸಮೀಪದ ಕೊರವಡಿ ಕೊಮೆ ಸಮುದ್ರ ಕಿನಾರೆಯಲ್ಲಿ ಗುರುವಾರ ಮೀನುಗಾರರು ಸಮುದ್ರ ಪೂಜೆ ಮಾಡಿ ಬಾಗಿನ ಸಮರ್ಪಿಸಿದರು   

ಕುಂದಾಪುರ: ಇಲ್ಲಿಗೆ ಸಮೀಪದ ಕೊಮೆ ಕೊರವಡಿ ಮೀನುಗಾರರು ಗುರುವಾರ ಸಮುದ್ರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.

ಬೊಬ್ಬರ್ಯ ಹಾಗೂ ಹಳೆಯಮ್ಮನ ದೈವಸ್ಥಾನದಲ್ಲಿ ಅರ್ಚಕ ಮಂಜುನಾಥ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಾನಗಳು ನಡೆದವು. ಬಳಿಕ ಸಮುದ್ರ ಕಿನಾರೆಗೆ ತೆರಳಿದ ಮೀನುಗಾರರು, ಮೀನುಗಾರ ಮುಖಂಡರಾದ ಸೋಮ ಕಾಂಚನ್‌ ಹಾಗೂ ಸಾಕು ದಂಪತಿ ನೇತೃತ್ವದಲ್ಲಿ ಸಮುದ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.

ದೇವಸ್ಥಾನದ ಪಾತ್ರಿಗಳಾದ ರಾಘವೇಂದ್ರ, ರಾಮ, ರವಿ, ಮಂಜುನಾಥ, ದೈವಸ್ಥಾನದ ಅರ್ಚಕ ಬಸವ ಹಟ್ಟಿಮನೆ, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರ್‌ ಕಾಂಚನ್‌ ಕೊಮೆ, ಕೈರಂಪಣಿ ದೋಣಿ ಮಾಲೀಕರಾದ ರಾಮ ಕಾಂಚನ್‌, ವಿಶ್ವನಾಥ ಕೊರವಡಿ, ಸೀತಾರಾಮ, ಸೋಮ ಪುತ್ರನ್‌, ಕಂತಲೆ ಬಲೆ ದೋಣಿ ಮಾಲೀಕರಾದ ಯೋಗೀಶ್‌ ಕುಂದರ್‌, ರಾಘವೇಂದ್ರ ಕಾಂಚನ್‌, ಆನಂದ, ತಿಮ್ಮಣ್ಣ, ರಾಘವೇಂದ್ರ, ಪ್ರಕಾಶ್‌, ರಾಘವೇಂದ್ರ ಬಿ.ಡಿ., ಶೇಖರ ಇಂಬಾಳಿ ಮನೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.