
ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ಮೋಹನದಾಸ್ ಪೈ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ಅಂತರಕಾಲೇಜು ರಸಪ್ರಶ್ನೆ ಸ್ಪರ್ಧೆ ಬುಧವಾರ ನೆರವೇರಿತು.
ಮಣಿಪಾಲದ ಐಎಸ್‌ಎ ಫೌಂಡೇಶನ್‌ನ ಪ್ರಭಾಕರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಎಂಜಿಎಂ ಪಿಯು ಕಾಲೇಜಿನ ಮನೀಷ್ ಭಾಗವತ್ ಮತ್ತು ಪ್ರೇರಣ್ ಅವರು ಅತ್ಯುತ್ತಮ ಸಾಧನೆ ಮೆರೆದು ₹ 5 ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದರು. ಉಡುಪಿ ಜ್ಞಾನಸುದಾ ಕಾಲೇಜಿನ ಸುಮುಖ ರಾವ್ ಬಿ.ಎಸ್. ಮತ್ತು ವಂಶೀ ಕೃಷ್ಣ ಅವರು ₹ 3 ಸಾವಿರ ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದರು. ಅದೇ ಕಾಲೇಜಿನ ಮನೀಷ್ ಬಿಲ್ಲವ ಮತ್ತು ರಿತಿಕ್ ಎನ್.ಶೆಟ್ಟಿ ಅವರು ₹2 ಸಾವಿರ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಗಳಿಸಿದರು.
₹1,000 ನಗದು ಮೊತ್ತದ ಮೂರು ಸಮಾಧಾನ ಬಹುಮಾನಗಳನ್ನು ಕ್ರಮವಾಗಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಚಿಂತನ್ ಮನು ಹೆಗ್ಡೆ, ಮಿಹಿರ್ ಹೆಗ್ಡೆ, ಕುಂದಾಪುರ ಸೇಂಟ್ ಮೇರಿಸ್ ಪಿಯು ಕಾಲೇಜಿನ ಅಲೀಸ್ಟನ್ ಮತ್ತು ಪೃಥ್ವಿರಾಜ್ ಗಾಣಿಗ ಹಾಗೂ ಕಾರ್ಕಳ ಜ್ಞಾನಸುಧಾ ಕಾಲೇಜಿನ ಅನುಷ್ಕಾ ಹೆಗ್ಡೆ ಮತ್ತು ಪ್ರಥುಲ್ ಡಿಸೋಜಾ ಅವರಿಗೆ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ವಿಶ್ವನಾಥ್ ಪೈ, ಕಾಲೇಜು ಪ್ರಾಂಶುಪಾಲ ದೇವೀದಾಸ್ ಎಸ್. ನಾಯಕ್, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಅಧ್ಯಕ್ಷ ಧೀರಜ್ ಉಪಸ್ಥಿತರಿದ್ದರು.
ಬಹುಮಾನಗಳ ಪಟ್ಟಿಯನ್ನು ವರ್ಷಿಣಿ ಕೋಟ್ಯಾನ್ ಪ್ರಕಟಿಸಿದರು. ವಿಘ್ನೇಶ್ ಭಟ್ ವಂದಿಸಿದರು. ಚೇತನಾ, ಸ್ಟಾಲಿನ್ ಡಾನ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.