ADVERTISEMENT

ಅಲ್‌ಖೈದಾ ಹೇಳಿಕೆ ಖಂಡಿಸಿ: ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:38 IST
Last Updated 6 ಏಪ್ರಿಲ್ 2022, 15:38 IST
ರಘುಪತಿ ಭಟ್‌, ಶಾಸಕ
ರಘುಪತಿ ಭಟ್‌, ಶಾಸಕ   

ಉಡುಪಿ: ಹಿಜಾಬ್ ಪರ ಹೋರಾಟಗಾರ್ತಿಯರು ದೇಶದ ನೈಜ ಪ್ರಜೆಗಳಾಗಿದ್ದರೆ ಅಲ್‌ಖೈದಾ ಹೇಳಿಕೆಯನ್ನು ಖಂಡಿಸಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದ ಅನ್ನ, ನೀರು, ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿನಿಯರು ಭಯೋತ್ಪಾದನಾ ಸಂಘಟನೆಯ ಬೆಂಬಲ ಅಗತ್ಯವಿಲ್ಲ ಎಂದು ಹೇಳಬೇಕು. ಈ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕು ಎಂದರು.

ಹೈಕೋರ್ಟ್ ತೀರ್ಪು ಬಂದ ಕೂಡಲೇ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು ಹಿಜಾಬ್ ಪರವಾಗಿ ಅಲ್ ಖೈದಾ ಬೆಂಬಲ ನೀಡಿದ ಹೇಳಿಕೆಯ ಬಗ್ಗೆಯೂ ಸ್ಪಷ್ಟನೆ ಕೊಡಬೇಕು. ಎಸ್‌ಡಿಪಿಐ ಹಾಗೂ ಸಿಎಫ್ಐ ಪಕ್ಷಗಳು ಆಲ್ ಖೈದಾ ಜೊತೆ ಸಂಪರ್ಕದಲ್ಲಿವೆ. ತನಿಖೆ ನಡೆದರೆ ಸಂಘಟನೆಗಳ ಷಡ್ಯಂತ್ರಗಳು ಹೊರಬೀಳಲಿವೆ ಎಂದರು.

ADVERTISEMENT

ಹಿಜಾಬ್‌ ಪರವಾಗಿ ಹೋರಾಟ ನಡೆಸುತ್ತಿರುವ ಆರು ವಿದ್ಯಾರ್ಥಿಗಳಿಗೆ ಹಣಕಾಸಿನ ವ್ಯವಸ್ಥೆಯಾಗಿರುವ ಬಗ್ಗೆಯೂ ತನಿಖೆಯಾಗಬೇಕು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದು, ವಿದ್ಯಾರ್ಥಿಗಳನ್ನು ಬಳಸಿಕೊಂಡಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.