ADVERTISEMENT

ರೈಲುಗಳ ತಾತ್ಕಾಲಿಕ ರದ್ದು, ಸಮಯ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 15:04 IST
Last Updated 17 ಫೆಬ್ರುವರಿ 2020, 15:04 IST
ರೈಲು
ರೈಲು   

ಉಡುಪಿ: ಫರಿದಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರವನ್ನು ಫೆ.28ರವರೆಗೆ ತಾತ್ಕಾಲಿಕವಾಗಿ ರದ್ದು ಹಾಗೂ ಸಮಯ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲು ರದ್ದು:

ಎರ್ನಾಕುಲಂ ಜಂಕ್ಷನ್‌–ನಿಜಾಮುದ್ದೀನ್ ಮಂಗಳ ಲಕ್ಷ್ಮದ್ವೀಪ ಎಕ್ಸ್‌ಪ್ರೆಸ್‌ (12617) ರೈಲು ಫೆ.23, 24, 28ರಂದು ಸಂಚರಿಸುವುದಿಲ್ಲ. ಫೆ.26, 27, 28ರಂದು ಸಂಚರಿಸಬೇಕಿದ್ದ (12618) ನಿಜಾಮುದ್ದೀನ್–ಎರ್ನಾಕುಲಂ ಜಂಕ್ಷನ್‌–ಮಂಗಳ ಲಕ್ಷ್ಮದ್ವೀಪ ಎಕ್ಸ್‌ಪ್ರೆಸ್‌, 26 ರಂದು ಓಡಬೇಕಿದ್ದ (12218) ಚಂಡಿಘಡ–ಕುಚುವೆಲಿ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌, 29ರಂದು ಹೊರಡಬೇಕಿದ್ದ 12217 ಕುಚುವೆಲಿ–ಚಂಡಿಘಡ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌, 28ರಂದು ಸಂಚರಿಸಬೇಕಿದ್ದ22659 ಕುಚುವೆಲಿ, ಡೆಹ್ರಾಡೂನ್ ಎಕ್ಸ್‌ಪ್ರೆಸ್‌, ಮಾರ್ಚ್ 2ರಂದು ಓಡಬೇಕಿದ್ದ ಡೆಹ್ರಾಡೂನ್–ಕುಚುವೆಲಿ ಎಕ್ಸ್‌ಪ್ರೆಸ್‌, ಫೆ.24, 25, 26ರಂದು ತೆರಳಬೇಕಿದ್ದ12779 ವಾಸ್ಕೊಡಗಾಮ–ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್‌, 26, 27, 28ರಂದು ಸಂಚರಿಸಬೇಕಿದ್ದ ನಿಜಾಮುದ್ದೀನ್‌–ವಾಸ್ಕೊಡಗಾಮ ಗೋವಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಿದೆ.

ADVERTISEMENT

ಸಮಯ ಬದಲಾವಣೆ:

ಫೆ.27ರಂದು ತಿರುವನಂತಪುರಂ ಸೆಂಟ್ರಲ್‌–ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 2 ಗಂಟೆ ತಡವಾಗಿ, 28ರಂದು ನಿಜಾಮುದ್ದೀನ್‌–ಮಡಗಾವ್‌ ಜಂಕ್ಷನ್‌, ರಾಜಧಾನಿ ಎಕ್ಸ್‌ಪ್ರೆಸ್‌ 3.35 ಗಂಟೆ ತಡವಾಗಿ, ನಿಜಾಮುದ್ದೀನ್‌ ಮಡಗಾವ್‌ ಜಂಕ್ಷನ್‌ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು 29ರಂದು 3.05 ಗಂಟೆ ತಡವಾಗಿ, ನಿಜಾಮುದ್ದೀನ್‌–ತಿರುವನಂತಪುರಂ–ಸೆಂಟ್ರಲ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮಾರ್ಚ್‌ 1ರಂದು 4.15 ಗಂಟೆ ತಡವಾಗಿ, ಅಮೃತ್‌ಸರ್–ಕುಚುವೆಲಿ ಎಕ್ಸ್‌ಪ್ರೆಸ್‌ ರೈಲು ಮಾರ್ಚ್ 1ರಂದು 2 ಗಂಟೆ ತಡವಾಗಿ ನಿಲ್ದಾಣ ಬಿಡಲಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ರೈಲ್ವೆ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.