ADVERTISEMENT

ವರುಣನ ಅಬ್ಬರ: ಗುಡುಗಿ ಸಿಡಿಲಿನ ಅಬ್ಬರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 16:00 IST
Last Updated 6 ಜನವರಿ 2021, 16:00 IST
ಉಡುಪಿ ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಯುವತಿಯರು.
ಉಡುಪಿ ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಯುವತಿಯರು.   

ಉಡುಪಿ: ಕಾರ್ಕಳ, ಕುಂದಾಪುರ, ಹೆಬ್ರಿ, ಬ್ರಹ್ಮಾವರ ಉಡುಪಿ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಸಂಜೆಯ ಹೊತ್ತಿಗೆ ಆರಂಭವಾದ ಮಳೆ 3 ತಾಸಿಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು.

ಗುಡುಗು ಸಿಡಿಲು ಮಳೆಯ ಆರ್ಭಟಕ್ಕೆ ರಸ್ತೆಗಳೆಲ್ಲ ಮಳೆಯ ನೀರಿನಿಂದ ಜಲಾವೃತಗೊಂಡವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನಕ್ಕೆ ತೊಂದರೆಯಾಯಿತು. ವಿದ್ಯುತ್ ವ್ಯತ್ಯಯದಿಂದ ಹಲವು ಬಡಾವಣೆಗಳು ಕತ್ತಲಲ್ಲಿ ಮುಳುಗಿದ್ದವು.‌ ಬೇಸಿಗೆಯ ಬಿಸಿಲಿಗೆ ಒಣಗಿದ್ದ ತೋಡುಗಳು ಮಳೆಯ ನೀರಿನಿಂದ ತುಂಬಿ ತುಳುಕಿದವು. ಚರಂಡಿ ಉಕ್ಕಿ ಹರಿದು ಹಲವು ಕಡೆ ಅವ್ಯವಸ್ಥೆ ನಿರ್ಮಾಣವಾಗಿತ್ತು.

ಮಳೆ ಮುನ್ಸೂಚನೆ:ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಧ್ಯಾಹ್ನ ಮುನ್ಸೂಚನೆ ನೀಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.