ADVERTISEMENT

ಮಳೆ: ಕೃಷಿಭೂಮಿ, ತೋಟಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:20 IST
Last Updated 7 ಜುಲೈ 2022, 4:20 IST

ಹಿರಿಯಡಕ: ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳವಾರ ಮಧ್ಯಾಹ್ನ ವೇಳೆಗೆ ಹಿರಿಯಡಕ ಪರಿಸರದ ಬೊಮ್ಮರಬೆಟ್ಟು, ಭೈರಂಪಳ್ಳಿ, ಶೀರೂರು, ಆತ್ರಾಡಿ, ಪರೀಕ ಪರಿಸರದ ಸ್ವರ್ಣಾ ನದಿ ಪಾತ್ರದ ಕೃಷಿ ಭೂಮಿಗಳು, ಪಾಪನಾಶಿನಿ ನದಿ ಪಾತ್ರದ ಹಿರೇಬೆಟ್ಟು, ಮರ್ಣೆ, ಕೊಡಂಗಳ, ಕರ್ವಾಲು, ಪೆರ್ಣಂಕಿಲ, ಕೊಡಿಬೆಟ್ಟು ಭಾಗದ ಕೃಷಿ ಭೂಮಿ, ತೋಟಗಳು ಜಲಾವೃತಗೊಂಡಿದ್ದವು. ಬುಧವಾರ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾದ ಕಾರಣ ನಿಧಾನವಾಗಿ ನೀರು ಇಳಿಕೆಯಾಗುತ್ತಿದೆ‌. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.