ಉಡುಪಿ: ರಾಮಾಯಣ, ಮಹಾಭಾರತ ಎರಡು ಸಾಹಿತ್ಯಗಳು ದೇಶದ ಸಂಸ್ಕೃತಿಯ ಮೂಲಬೇರುಗಳು. ಉದಾತ್ತವಾದ ಸನಾತನ ಸಂಸ್ಕೃತಿಯ ಕಾರಣಕ್ಕೆ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಕುರಿತು ಮಾತನಾಡಿದ ಶ್ರೀಗಳು ‘ಆದರ್ಶ ಪುರುಷ ಶ್ರೀರಾಮನಅವತಾರ ಭೂಮಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವುದು ಶತಮಾನಗಳ ಕನಸು. ಅಸಂಖ್ಯ ಹಿಂದೂಗಳ ಹೋರಾಟ ಬಲಿದಾನವೂ ರಾಮಮಂದಿರ ನಿರ್ಮಾಣದ ಹಿಂದಿದೆ’ ಎಂದಿದ್ದಾರೆ.
ಅಯೋಧ್ಯೆ ರಾಮಮಂದಿರನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕಾಯ ವಾಚ ಮನಸ ತೊಡಗಿಸಿಕೊಳ್ಳೋಣ ಎಂದು ಶ್ರೀಗಳು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.